ಹುಬ್ಬಳ್ಳಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ನಗರದಲ್ಲಿ ವಿವಿಧ ಸಂಘಟನೆಗಳಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ನವನಗರದ ಮೈತ್ರಿ ವೃದ್ಧಾಶ್ರಮದಲ್ಲಿ ದಲಿತ ಸಂಘಟನೆ ಆಶ್ರಯದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಹಿರಿಯರಿಗೆ ಸಂವಿಧಾನ ನೀಡಿರುವ ವಿವಿಧ ಅವಕಾಶ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಎಪಿಎಂಸಿ ನವನಗರ ಠಾಣೆ ಇನ್ಸಪೆಕ್ಟರ್ ಸಮೀವುಲ್ಲಾ, ಬಸವರಾಜ ಚಳಗೇರಿ ಮಾತನಾಡಿದರು.
ವಿಜಯ ಮೂಲಿಮನಿ, ಸಾಧಿಕ್ ಲಕ್ಕುಂಡಿ, ಬಸವರಾಜ ಮಾದರ, ಈಶ್ವರ ಮಾದರ, ರವಿ ಮೂಡನವರ, ಪರಮೇಶ ಮಾದರ, ನಾಗಪ್ಪ ಮಾದರ, ಸಿದ್ದಪ್ಪ ಮಾದರ ಇತರರು ಇದ್ದರು.
ಬಿಇಡಿ ಕಾಲೇಜಿನಲ್ಲಿ:
ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಶಿಣ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಮಹಾಪರಿನಿರ್ವಾಣ ದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರ ಕೊಡುಗೆಗಳನ್ನು ಸ್ಮರಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಜಯಶ್ರೀ ಕುಂದಗೋಳಮಠ, ಅನಿಲ ಗುಮ್ಮಗೋಳ ಮತ್ತು ಬೋಧಕ- ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ನವಭಾರತ ನಿರ್ಮಾಪಕರು:
ಹುಬ್ಬಳ್ಳಿ ವಿದ್ಯಾನಗರದ ಸಮರ್ಥ ಕಾಲೇಜಿನಲ್ಲಿ ಎಬಿವಿಪಿ ಶಹರ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿದರು.
ಸ್ವತಂತ್ರ ಭಾರತಕ್ಕೆ ಲಿಖಿತ ಸಂವಿಧಾನ ನೀಡಿ ಸಮಸಮಾಜದ ಕನಸನ್ನು ನನಸು ಮಾಡಿದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ ಅವರು ನವಭಾರತ ನಿರ್ಮಾಣ ಮಾಡಿದ ಮಹಾನ್ ಚೇತನರಾಗಿದ್ದಾರೆ ಎಂದರು.
ಕಾಲೇಜಿನ ಪ್ರಾಚಾರ್ಯ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಶಹರ ಘಟಕದ ಪದಾಧಿಕಾರಿಗಳು ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.