ಜಿಲ್ಲೆ

ಮಹಾಂತ ಶಿವಯೋಗಿಗಳ ಭಜನಾ ಸಪ್ತಾಹ ಆರಂಭ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ 67ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏ. 5ರಿಂದ ಭಜನಾ ಸಪ್ತಾಹ ಆರಂಭವಾಯಿತು.

ಜಾತ್ರೆ ಅಂಗವಾಗಿ ಏ. 12ರಂದು ವೇದಮೂರ್ತಿ ಸಂಗಮೇಶ ಹಿರೇಮಠ ಅವರ ನೇತೃತ್ವದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 8 ಗಂಟೆಗೆ ಸಹಸ್ರ ಬಿಲ್ವಾರ್ಚನೆ, 7.15ಕ್ಕೆ ಕಳಸಾರೋಹಣ, ಬೆಳಗ್ಗೆ 9 ಗಂಟೆಗೆ ಸಪ್ತಾಹ ಮಂಗಲಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ಗಣಾರಾಧನೆ, 11 ಗಂಟೆಯಿAದ ಪ್ರಸಾದ ವಿತರಣೆ ಆರಂಭ ಮತ್ತು ಮೈಲಾರಲಿಂಗನ ಪವಾಡಗಳು ನಡೆಯಲಿವೆ. ಮಧ್ಯಾಹ್ನ 3 ಗಂಟೆಗೆ ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. 15ರಿಂದ 16ರವರೆಗೆ ಬಯಲು ಕುಸ್ತಿ ನಡೆಯಲಿವೆ.

11ರಂದು ಬೆಳಗ್ಗೆ 8 ಗಂಟೆಗೆ ಮುಧೋಳದ ಶ್ರೀ ವೀರಭದ್ರೇಶ್ವರ ರಕ್ತ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ. 6ರಂದು ಸಂಜೆ 5 ಗಂಟೆಗೆ ಕಳಸಾವರೋಹಣ ನಡೆಯಲಿದೆ. ನಂತರ ಕಡಬಿನ ಕಾಳಗದ ಮುಖಾಂತರ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ. ಸುತ್ತಲಿನ ಗ್ರಾಮಗಳ ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮಳೆಪ್ಪಜ್ಜನ ಮಠದ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.