RAICHUR Corporation budget 
ಜಿಲ್ಲೆ

ಮಹಾನಗರ ಪಾಲಿಕೆ ಸ್ಥಳೀಯರೊಂದಿಗೆ ಆಯವ್ಯಯ ಸಭೆ • ಮೂಲಭೂತ ಸೌಲಭ್ಯಕ್ಕೆ ಅನುದಾನ ಮಿಸಲಿಡಿ

ರಾಯಚೂರು ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ ಹಾಗೂ ಆಯುಕ್ತ ಜೋಬಿನ್ ಮಹೋಪಾತ್ರ ನೇತೃತ್ವದಲ್ಲಿ 2025-26ನೇ ಸಾಲಿನ ಆಯವ್ಯಯ ಸಭೆ ನಡೆಯಿತು.

ನಗರ ರಸ್ತೆ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ ಹಾಗೂ ತೆರಿಗೆ ಸಂಗ್ರಹದಲ್ಲಿ ಆಗುತ್ತಿರುವ ಅಪವ್ಯಯ ತಡೆಯಬೇಕೆಂದು ನಾಗರೀಕರು ಬಜೆಟ್ ಪೂರ್ವ ಸಿದ್ದತಾ ಸಭೆಯಲ್ಲಿ ಮನವಿ ಮಾಡಿದರು.

ನಗರಸಭೆ ಹಿರಿಯ ಸದಸ್ಯ ಜಯಣ್ಣ ಮಾತನಾಡಿ 2025-26ನೇ ಸಾಲಿನ ಬಜೆಟ್ ನಲ್ಲಿ ನಗರದ ಅಭಿವೃದ್ಧಿಗೆ ಪ್ರಮುಖ ವಿಷಯಗಳ ಸೇರ್ಪಡೆ ಮಾಡಬೇಕು, ಸಾಕಷ್ಟು ಸಮಸ್ಯೆಗಳಿಗೆ ನಾಗರೀಕ ಪ್ರಜ್ಞೆ ಮೂಡಿಸಬೇಕು, ಸ್ವಚ್ಚತೆ, ರಸ್ತೆ, ದುರಸ್ತಿ, ಕಸ ವಿಲೇವಾರಿ ಮಾಡಬೇಕಾಗಿದೆ. ಬಜೆಟ್‌ಗೆ ಬೇಕಾದ ಆರ್ಥಿಕ ಕ್ರೋಢಿಕರಣದ ಮೇಲೆ ಚರ್ಚೆ ನಡೆಯಬೇಕಿದೆ ಎಂದರು. ನಗರಸಭೆ ಮಹಾನಗರ ಪಾಲಿಕೆಯಾಗಿ ಹೊಸದಾಗಿ ಮೇಲ್ದರ್ಜೆಗೆರಿದೆ, ಹೈಟೆಕ್ ಗ್ರಂಥಾಲಯ, ರಸ್ತೆಗಳ ಜೋಡಣೆ ದುರಸ್ತಿಗೆ ಪಾಲಿಕೆಯಿಂದ ಬಜೆಟ್ ಅನುದಾನ ಯಾವ ರೀತಿ ಕೂಡಿಸಬೇಕು ಎಂದು ಸಮರ್ಪಕ ಚರ್ಚೆ ಮಾಡಿ ಅನುದಾನ ನಿಗದಿಪಡಿಸಬೇಕು ಎಂದರು.

ಹೋರಾಟಗಾರ ಡಾ.ರಜಾಕ್ ಉಸ್ತಾದ್ ಮಾತನಾಡಿ, ರಾಯಚೂರಿನಲ್ಲಿ ಕಸ, ನೀರು, ಚರಂಡಿ, ಸ್ವಚ್ಚತೆ ಸಮಸ್ಯೆ ಇದೆ, ಇದಕ್ಕಾಗಿ ಸಹಾಯವಾಣಿ ಕೇಂದ್ರ ಮಾಡಬೇಕು.  ರಾಜ್ಯ ಮಟ್ಟದಲ್ಲಿದ್ದು, ಸಾಕಷ್ಟು ಅನುಕೂಲವಾಗಿದೆ ಎಂದರು. ಕಸ ನಿರ್ವಹಣೆ, ಪಾದಚಾರಿಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ, ಫುಡ್ ಪಾರ್ಕ್, ಸ್ವೀಟ್ ಪಾರ್ಕ್, ಲಾರಿಗಳು ನಿಲುಗಡೆ, ನಾಯಿಗಳ ಕಾಟ ಮಿತಿ ಮೀರಿದೆ ಕ್ರಮ ವಹಿಸಬೇಕು,

ಟ್ರಾಫಿಕ್ ಸಿಗ್ನಲ್ ಕೆಲಸ ಮಾಡುತ್ತಿದೆ. ಕೆಲವು ಕಡೆ ಕೆಲಸ ಮಾಡುತ್ತಿಲ್ಲ, ನಗರಸಭೆಯಿಂದ ಸಿಗ್ನಲ್ ಅಳವಡಿಕೆ ಮಾಡಬೇಕು, ಬೇಸಿಗೆ ಪ್ರಾರಂಭವಾಗಲಿದ್ದು ನಗರದ ಸರ್ಕಲ್‌ನಲ್ಲಿ ಮೇಲ್ಬಾಗದಲ್ಲಿ ಗ್ರೀನ್ ಮ್ಯಾಟ್ ಅಳವಡಿಕೆ ಮಾಡಬೇಕು, ನಗರದಲ್ಲಿ ಶಾಲೆಗಳಿಗೆ ಕನಿಷ್ಟ ಅನುದಾನ ಮೀಸಲಿಡಬೇಕು, ಪ್ರತಿ ವರ್ಷ ಮಳೆಗಾಲದಲ್ಲಿ ಕೆಲ ಬಡಾವಣೆಗಳು ನೀರಿನಲ್ಲಿ ಮುಳುಗಿ ಹೋಗುತ್ತಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು, ರಸ್ತೆ ಬದಿಯಲ್ಲಿ ಟಿಸಿ ಅಳವಡಿಕೆ ಮಾಡಿದ್ದು, ಸುತ್ತಲೂ ತಂತಿ ಬೇಲಿ ಅಳವಡಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ, ನೀರಿನ ತಾಪಾಸಣೆ ಲ್ಯಾಬ್ ಮಾಡಬೇಕು, ಇದರಿಂದ ಸಾವು ತಪ್ಪಿಸಬಹುದು, ನಗರದ ವಿವಿಧ ಇಲಾಖೆಗೆ ಅನುದಾನ ನಗರದಲ್ಲಿ ಕೆಲಸಗಳಿಗೆ, ಗ್ರಾಂಟ್ ಬಂದಲ್ಲಿ ನಗರಸಭೆಯಿಂದ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.

ದಲಿತ ಸಂಘಟನೆ ಮುಖಂಡ ವಿಶ್ವನಾಥ ಪಟ್ಟಿ, ಎಂ.ಈರಣ್ಣ  ಮಾಜಿ ನಗರಸಭೆ ನಾಮ ನಿರ್ದೇಶಿತ ಸದಸ್ಯ ಸಂಗಟಿ ರಾಜು,ಸಿಪಿಐಎಂ ಮುಖಂಡ ಕೆ.ಜಿ.ವೀರೇಶ ಸೇರಿ ಪಾಲಿಕೆ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.