ಮೈಸೂರು: ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಡಿ.31 ರಂದು ಸಂಜೆ 6.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ‘ಮಹಾಮಾಯಿ’ ನಾಟಕ ಪ್ರದರ್ಶನ ನಡೆಯಲಿದೆ.
ನಟನ ರಂಗಶಾಲೆಯ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ಇದಾಗಿದೆ. ನಟನ ರಂಗಶಾಲೆಯ ಪ್ರಾಂಶುಪಾಲ ಮೇಘ ಸಮೀರ ನಾಟಕದ ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಜಗತ್ತಿನಾದ್ಯಂತ ಸಾಹಿತ್ಯದ ವಸ್ತುವಾಗಿದೆ. ಈ ವಸ್ತುವಿಗೆ ಬಹಳ ಸಂಕೀಣರ್ರ್ವೂ, ನವೀನವೂ ಆದ ತಿರುವನ್ನು ಮಹಾಮಾಯಿ ನಾಟಕ ನೀಡಿದೆ.