ಜಿಲ್ಲೆ

ಬೆಂಗಳೂರಲ್ಲಿ ಕುಸ್ತಿ ಚಾಂಪಿಯನ್‌ಷಿಪ್ -ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪ್ರಾರ್ಥನೆ

Mangaluru - Nishantha Narayana

ಪುತ್ತೂರು:ರಾಜ್ಯದಲ್ಲಿ ಪ್ರಥಮ ಬಾರಿಗೆ ೨೦೨೪ ರ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅವಕಾಶ ಕಲ್ಪಿಸಿದ್ದು, ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.೫ ರಿಂದ ೮ ರವರೆಗೆ ಪಂದ್ಯಾಟ ನಡೆಯಲಿದೆ.

ಆ ಪ್ರಯುಕ್ತ ಇಂಡಿಯನ್ ಬೀಚ್ ಕುಸ್ತಿ ಫೆಡರೇಶನ್ ಅಧ್ಯಕ್ಷ ಪುತ್ತೂರು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಶುಕ್ರವಾರ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಪರ್ಧಾ ಪಟ್ಟಿಯನ್ನು ಶ್ರೀ ದೇವರ ನಡೆಯಲ್ಲಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಳದ ಪ್ರಧಾನ ಅರ್ಚಕ ವಿ.ಎಸ್ ಭಟ್ ಧಾರ್ಮಿಕ ವಿಽವಿಧಾನ ನೆರವೇರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕುಸ್ತಿ ಸಂಘದ ಉಸ್ತುವಾರಿ ಸುಜಿತ್ ರೈ, ಕರ್ನಾಟಕ ರಾಜ್ಯ ಕುಸ್ತಿ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಮದಾಸ್ ಶೆಟ್ಟಿ, ಜಯಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕಾರ್ತಿಕ್‌ರೈ, ಸಿಜ್ಲರ್ ಪ್ರಸನ್ನ ಕುಮಾರ್ ರೈ ಯು.ಆರ್ ಪಾರ್ಪಟೀಸ್‌ನ ಮಾಲೀಕ ಉಜ್ವಲ್ ಪ್ರಭು, ತಿಲಕ್‌ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು.

ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಗೆಲುವು ಸಾಽಸಿದವರಿಗೆ ಮುಂದೆ ವಿಶ್ವಚಾಂಪಿಯನ್ ಷಿಪ್‌ನಲ್ಲಿ ಸ್ಪಽಸುವ ಅವಕಾಶ ಕಲ್ಪಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಪಂದ್ಯಾಟವನ್ನು ಆಯೋಜನೆ ಮಾಡುವುದರಿಂದ ದಕ್ಷಿಣ ಭಾರತದ ಎಲ್ಲ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಸಿಗುತ್ತದೆ. ಕರ್ನಾಟಕದಲ್ಲಿರುವ ಎಲ್ಲ ಕುಸ್ತಿ ಪಟಗಳು, ಗರಡಿ ಮನೆಗಳು ಸಹಿತ ಎಲ್ಲರು ಭಾಗವಹಿಸಬಹುದಾಗಿದೆ. ಪೇಟಾದಿಂದ ಆಗಿರುವ ತೊಂದರೆಗೆ ಸಂಬಂಽಸಿ ಯಾವುದೇ ಸಮಸ್ಯೆ ಆಗುವುದಿಲ್ಲ. ನ್ಯಾಯಾಲಯದಿಂದ ಉತ್ತಮ ತೀರ್ಪು ಬರಲಿದೆ. ಬೆಂಗಳೂರಿನಲ್ಲಿ ಕಂಬಳ ನಡೆಯುತ್ತದೆ.

|ಬಿ. ಗುಣರಂಜನ್ ಶೆಟ್ಟಿ

ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ