ಮಹಾಲಿಂಗಪುರ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ ತಾಲೂಕಿನ ಢವಳೇಶ್ವರ, ಯರಗಟ್ಟಿ, ಗೋಕಾಕಗೆ ಸಂಪರ್ಕ ಕಲ್ಪಿಸುವ ಸಮೀಪದ ಢವಳೇಶ್ವರ ಬ್ರಿಜ್ ಗುರುವಾರ ಮಧ್ಯಾಹ್ನ ಮುಳುಗಿದೆ.
ಸಮೀಪದ ನಂದಗಾಂವ ಬ್ರಿಜ್ ಕೂಡ ಜಲಾವೃತವಾಗಿರುವುದರಿಂದ ಅವರಾದಿ, ವೆಂಕಟಾಪುರ, ತಿಮ್ಮಾಪುರ, ಯಾದವಾಡ ಯರಗಟ್ಟಿಗಳಿಗೆ ರಸ್ತೆ ಸಂಚಾರ ಬಂದಾಗಿದೆ. ನಂದಗಾಂವ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಗೋವಿನಜೋಳ, ಕಬ್ಬು, ತರಕಾರಿ ಬೆಳೆ ನಾಶವಾಗಿದೆ.
EndFragment