ಮಹಾಲಿಂಗಪುರ: ಪಟ್ಟಣದಲ್ಲಿ ಮಂಗಳವಾರ ಮತ್ತೆ ನಾಲ್ಕು ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಪಟ್ಟಣದ ಶಾಂತಿನಿಕೇತನ ಕಾಲನಿಯಲ್ಲಿ ಎರಡು, ಬುದ್ನಿ ಪಿಡಿ ಹಾಗೂ ಸಾಧುನಗುಡಿ ಓಣಿಯಲ್ಲಿ ತಲಾ ಒಂದೊಂದು ಕೇಸ್‌ಗಳು ಪತ್ತೆಯಾಗಿವೆ.
ಮೂವರು ಸೊಂಕಿತರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಒಬ್ಬರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಏ.2 ರಿಂದ ಏ.27 ರವರೆಗೆ ಪಟ್ಟಣದಲ್ಲಿ ಒಟ್ಟು ಕರೊನಾ ಸೊಂಕಿತರ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.
ಪುರಸಭೆಗೆ ಕಡ್ಡಾಯ ಮಾಹಿತಿ ನೀಡಿ
14 ದಿನ ಜನತಾ ಕರ್ಫ್ಯೂ ನಿಮಿತ್ತ ಜಿಲ್ಲಾಧಿಕಾರಿಗಳು ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಬೇರೆ ರಾಜ್ಯಗಳಿಂದ ಅಥವಾ ಹೊರ ಊರುಗಳಿಂದ ಪಟ್ಟಣಕ್ಕೆ ಬರುವವರು ಕಡ್ಡಾಯವಾಗಿ 15 ದಿನ ಹೋಮ್ ಐಸೋಲೇಷನ್‌ನಲ್ಲಿ ಇರಬೇಕು. ಕರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಪರಸ್ಥಳಗಳಿಂದ ಬಂದವರು ಕಡ್ಡಾಯವಾಗಿ ಪುರಸಭೆ ಕಂದಾಯ ಅಧಿಕಾರಿ ಎನ್.ಎ.ಲಮಾಣಿ (94492 78541) ಅವರಿಗೆ ಮಾಹಿತಿ ನೀಡಬೇಕು. ಆದೇಶ ಉಲ್ಲಂಸಿದ್ದಲ್ಲಿ ತಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.