ಮಹಾಲಿಂಗಪುರ: ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 17 ವರ್ಷ ವಯೋಮಾನದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರನ್ನಬೆಳಗಲಿಯ ಬಿವಿವಿಎಸ್ ಪ್ರೌಢಶಾಲೆ ವಿದ್ಯಾರ್ಥಿ ಮಹಾಲಿಂಗ ದೊಡ್ಡಹಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸೆ. 12 ರವರೆಗೆ ಮುಧೋಳದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿ ಸಾಧನೆಗೆ ತರಬೇತುದಾರ ದೈಹಿಕ ಶಿಕ್ಷಕ ಕೆ.ಬಿ. ಕುಂಬಾಳಿ, ಸಂಸ್ಥೆಯ ಚೇರ್ಮನ್ ಶ್ರೀಮಂತ ಒಂಟಗೋಡಿ, ಅಧ್ಯಕ್ಷ ಎಲ್.ಪಿ. ಪೆಟ್ಲೂರ, ಉಪಾಧ್ಯಕ್ಷ ಡಿ.ವಿ ಬರಮನಿ, ಕಾರ್ಯದರ್ಶಿ ಪಂಡಿತ ಪೂಜಾರಿ, ಸದಸ್ಯರಾದ ಸಿ.ಜಿ. ನಾಯಕ, ಕೆ.ಎಂ. ಗಣಾಚಾರಿ, ಮುಖ್ಯಶಿಕ್ಷಕ ಗಾಣಿಗೇರ, ಶಿಕ್ಷಕರಾದ ಕೆ.ಎ. ಧಡೂತಿ, ಎಸ್.ಬಿ. ರಡ್ಡೆರಟ್ಟಿ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.