ಜಿಲ್ಲೆ

ಉಪ್ಪಿನಂಗಡಿ ಕ್ಷೇತ್ರದಲ್ಲಿ ಮಹಾಲಯ ಅಮಾವಾಸ್ಯೆ ಆಚರಣೆ

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಮಹಾಲಯ ಅಮಾವಾಸ್ಯೆ ಅಂಗವಾಗಿ ಭಾನುವಾರ ಅಸಂಖ್ಯಾತ ಭಕ್ತರು ಆಗಮಿಸಿ ಗತಿಸಿದ ತಮ್ಮ ಪಿತೃಗಳಿಗೆ ಪಿಂಡ ಪ್ರದಾನಾದಿ ತಿಲಹೋಮ ತರ್ಪಣ ಕಾರ್ಯಗಳನ್ನು ನಡೆಸಿದರು.

ಭಾರೀ ಸಂಖ್ಯೆಯಲ್ಲಿ ರಾಜ್ಯದೆಲ್ಲೆಡೆಯಿಂದ ಮಾತ್ರವಲ್ಲದೆ ದೂರದ ಒರಿಸ್ಸಾ, ಮುಂಬೈ ಪ್ರದೇಶದಿಂದಲೂ ಭಕ್ತರು ಆಗಮಿಸಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ತೀರ್ಥಸ್ನಾನ ಮಾಡಿ ವಿಧಿವಿಧಾನ ನೆರವೇರಿಸಿದರು.

ಭಕ್ತರ ಅನುಕೂಲತೆಗಾಗಿ ಹೆಚ್ಚುವರಿ ವಿಭಾಗಗಳನ್ನು ತೆರೆದು ಪುರೋಹಿತರನ್ನು ನಿಯುಕ್ತಿಗೊಳಿಸಿ ವಿಧಿವಿಧಾನಗಳನ್ನು ನಡೆಸುವಂತಾಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರ ಹೊರತಾಗಿ ಅನೇಕ ಭಕ್ತರು ಸ್ವಯಂಪ್ರೇರಿತ ತರ್ಪಣಾದಿ ಕಾರ್ಯಗಳನ್ನು ಸಂಗಮ ಸ್ಥಳದಲ್ಲಿ ನಡೆಸಿ ಶ್ರೀ ದೇವರ ದರ್ಶನಗೈದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಸದಸ್ಯರಾದ ಸೋಮನಾಥ, ವೆಂಕಪ್ಪ ಪೂಜಾರಿ, ಅರ್ತಿಲ ಕೃಷ್ಣ ರಾವ್, ಡಾ.ರಮ್ಯಾ ರಾಜಾರಾಮ್ ಅನಿತಾ ಕೇಶವ್, ಗೋಪಾಲಕೃಷ್ಣ ರೈ, ದೇವಿದಾಸ್ ರೈ ಮೊದಲಾದವರಿದ್ದರು.