ಹೂವಿನಿಂದ ಅಲಂಕಾರಿಸಿರುವ ಮಹಾಲಕ್ಷ್ಮೀದೇವಿ. 
ಜಿಲ್ಲೆ

ಮಹಾಲಕ್ಷ್ಮೀದೇವಿ ದೇವಸ್ಥಾನದ ವಾರ್ಷಿಕೋತ್ಸವ ಅದ್ದೂರಿ

Kopala - Desk - Eraveni

ಲಿಂಗಸುಗೂರು: ಪಟ್ಟಣದ ರಾಯಚೂರು ಹೆದ್ದಾರಿ ಪಕ್ಕದ ಮಹಾಲಕ್ಷ್ಮೀ ದೇವಸ್ಥಾನದ 30ನೇ ವರ್ಷದ ವಾರ್ಷಿಕೋತ್ಸವವನ್ನು ಶ್ರಾವಣ ಶುಕ್ರವಾರ ಅದ್ಧೂರಿಯಾಗಿ ಆಚರಿಸಲಾಯಿತು.

ಬೆಳಗ್ಗೆ ಮಹಾಲಕ್ಷ್ಮೀ ಮೂರ್ತಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಶ್ರೀಸೂಕ್ತ ಮಂತ್ರ, ಚಿನ್ನಾಭರಣ, ಹೂವಿನ ಅಲಂಕಾರ ನೆರವೇರಿಸಿ ಬಳಿಕ ಮಹಾ ಮಂಗಳಾರತಿ, ಮುತ್ತೈದೆಯರಿಗೆ ಉಡಿ ತುಂಬುವುದು ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ಶ್ರಾವಣ ಮಾಸದ ಶುಕ್ರವಾರ, 30ನೇ ವರ್ಷ ಮತ್ತು 30ನೇ ತಾರೀಕು ವಿಶೇಷವಾಗಿದ್ದು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮಹಾಲಕ್ಷ್ಮೀ ದರ್ಶನ ಪಡೆದರು.

ದೇವಸ್ಥಾನ ಸಮಿತಿ ಅಧ್ಯಕ್ಷೆ ಸುನಂದಮ್ಮ ಮುನ್ನೂರು, ಅರ್ಚಕರಾದ ಚಂದ್ರಕಾಂತ ಶಾಸ್ತ್ರಿ, ಮೋಹನಾಚಾರ್ ಪ್ರಮುಖರಾದ ಸುಭಾಷ ರಡ್ಡಿ, ಹನುಮಯ್ಯ ರಡ್ಡಿ, ನರೇಶ ರಡ್ಡಿ, ರಾಜೇಶ, ಮೌನೇಶ ರಡ್ಡಿ, ಮೋಹನ ಪತ್ತಾರ, ಹನುಮಂತ ನಾಯಕ, ಸಚಿನ್ ಕೊಪ್ಪರಕರ್, ಜಿ.ಎಸ್.ನಾಯಕ, ಪರಶುರಾಮ ಬಾಲಗಾವಿ ಇತರರಿದ್ದರು.