ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಪ್ರತಿ ವರ್ಷ ಲಾಭಾಂಶದಲ್ಲಿ 40 ಲಕ್ಷ ರೂ. ವಿದ್ಯಾರ್ಥಿ ವೇತನ ಸಹಿತ 75 ಲಕ್ಷ ರೂ. ಅಧಿಕ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಗುರುವಾರ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಉಡುಪಿ ಮಹಿಳೆಯರಿಗೆ ಸುರತ ಮತ್ತು ಅಚ್ಚುಮೆಚ್ಚಿನ ಜಿಲ್ಲೆಯಾಗಿದೆ. ಅತೀ ಹೆಚ್ಚು ಉಸ್ತುವಾರಿ ಸಚಿವರು ಮಹಿಳೆಯರಾಗಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಹೆಚ್ಚಿನ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ರಥಕ್ಕೆ ಎರಡು ಚಕ್ರಗಳಿದ್ದಂತೆ ಸಮಾಜದಲ್ಲಿ ಗಂಡು&ಹೆಣ್ಣು ಜೊತೆಯಾಗಿ ಸಾಗುವ ಅವಶ್ಯಕತೆ ಇದೆ. ಅನೇಕ ವೈರುಧ್ಯಗಳ ನಡುವೆಯೂ ಹೆಣ್ಮಕ್ಕಳಿಗೆ ಸ್ವಲ್ಪ ಸ್ವಾತಂತ್ರ$್ಯ ಲಭಿಸಿದ್ದು, ಕಾನೂನುಗಳ ದುರುಪಯೋಗ ಸಲ್ಲದು. ಸ್ವಾತಂತ್ರ$್ಯ ಎಂಬುದು ಸ್ವೇಚ್ಛಾಚಾರಕ್ಕೆ ಕಾರಣವಾಗಬಾರದು. ಸಣ್ಣಪುಟ್ಟ ಕಾರಣಕ್ಕೆ ವಿಚ್ಛೇದನಕ್ಕೆ ಮೊರೆಹೋಗಬಾರದು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ವಾಣಿ ಬಲ್ಲಾಳ್, ಮಹಿಳಾ ಸಂದ ಸಂಚಾಲಕಿ ಜಯಮಂಗಳಾ, ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರಾದ ಸುಕನ್ಯಾ ಮೇರಿ, ಸಬಿತಾ ಗುಂಡ್ಮಿ, ಶೀಲಾ ಕೆ ಶೆಟ್ಟಿ, ನಿರುಪಮಾ ಪ್ರಸಾದ್ ಶೆಟ್ಟಿ, ವನಜ ಪೂಜಾರ್ತಿ ಬೀಡಿನಗುಡ್ಡೆ, ಪ್ರೇಮಾ ಬಾಯಿ, ಬೇಬಿ ಎಚ್. ಸಾಲ್ಯಾನ್, ವಿಮಲಾ ಚಂದ್ರಶೇಖರ್, ಪೂರ್ಣಿಮ ಪುತ್ರನ್, ಡಾ. ಸುರಕ್ಷಾ ಹಾಗೂ ತೇಜಸ್ವಿನಿ ಉದಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ&ಕಾಲೇಜುಗಳಿಗೆ 15 ಸ್ಯಾನಿಟರಿ ನ್ಯಾಪ್ಕಿನ್ ಡಿಸ್ಪೊಸಲ್ ಯಂತ್ರಗಳನ್ನು ವಿತರಿಸಲಾಯಿತು. ವಿಜೇತಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.