ವಿಜಯವಾಣಿ ಸುದ್ದಿಜಾಲ ಧಾರವಾಡ
ವೀರಭದ್ರ ದೇವರು ಲಿಂಗರೂಪದಲ್ಲಿ ನೆಲೆಸಿರುವ ಚಿಕ್ಕೋಡಿ ತಾಲೂಕು ಯಡೂರು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಾಜಗೋಪುರಗಳಿಗೆ 2026ರ ಮಾರ್ಚ್ 6ರಂದು ಮಹಾಕುಂಭಾಭಿಷೇಕ ಹಾಗೂ ಕಾಶಿಯ ಗಂಗಾರತಿ ಮಾದರಿಯಲ್ಲಿ ಕೃಷ್ಣಾ ನದಿ ತೀರದಲ್ಲಿ ಕೃಷ್ಣಾರತಿ ನಡೆಯಲಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯಡೂರ ಕ್ಷೇತ್ರದ ಶ್ರೀ ವೀರಭದ್ರ ದೇವರ ಭಕ್ತಗಣದ ಧರ್ಮ ಜಾಗೃತಿ ಸಂವಹನ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕರ್ನಾಟಕವೂ ಸೇರಿ ದೇಶದ ವಿವಿಧ ರಾಜ್ಯಗಳ ಸುಮಾರು 5 ಸಾವಿರಕ್ಕೂ ಅಽಕ ಮಹಿಳೆಯರು ಕೃಷ್ಣಾ ನದಿಯಿಂದ ಕುಂಭಗಳಲ್ಲಿ ಹೊತ್ತು ತರುವ ಪವಿತ್ರ ಜಲದಿಂದ ಪಂಚಪೀಠಗಳ ಎಲ್ಲ ಜಗದ್ಗುರುಗಳ ಸನ್ನಿಧಾನದಲ್ಲಿ ಹಾಗೂ ಸಾವಿರಾರು ಮಠಾಧೀಶರ ಸಮ್ಮುಖದಲ್ಲಿ ಮಹಾಕುಂಭಾಭಿಷೇಕ ನಡೆಯುತ್ತಿದೆ. ಇದೇ ದಿನ ಭಕ್ತರಿಗಾಗಿ ನಿರ್ಮಿಸಿರುವ ನೂತನ ಯಾತ್ರಿ ನಿವಾಸ ಲೋಕಾರ್ಪಣೆಯೂ ಜರುಗಲಿದ್ದು, ಮಾ. 6ರಂದೇ ಸಂಜೆ ಲಕ್ಷ ದೀಪೋತ್ಸವವೂ ನಡೆಯಲಿದೆ ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷ, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಜಿಲ್ಲಾ ಘಟಕ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಯಡೂರು ಕ್ಷೇತ್ರದ ಕಟ್ಟಡ ನಿರ್ಮಾಣ ಪ್ರಭಾರಾಽಕಾರಿ ಸುನೀಲ ಬಿರದೆ ಮಾತನಾಡಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮೊರಬ ಜಡಿಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ದೊಡವಾಡ ಹಿರೇಮಠದ ಶ್ರೀ ಜಡಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಳ್ಯಾಳಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ಶ್ರೀ ರೇಣುಕಪ್ರಸಾದ ಸ್ವಾಮೀಜಿ, ಯಡೂರು ಕಾಡಸಿದ್ಧೇಶ್ವರಮಠದ ಉತ್ತರಾಽಕಾರಿ ಶ್ರೀ ರೇಣುಕ ದೇವರು, ಮುರುಘಾಮಠದ ಧರ್ಮದರ್ಶಿ ಮಂಜುನಾಥ ಸಾಲಿಮಠ, ಯಡೂರು ಕ್ಷೇತ್ರದ ಕಾರ್ಯನಿರ್ವಾಹಕ ಅಽಕಾರಿ ಅಡವಯ್ಯ ಅರಳಿಕಟ್ಟಿಮಠ, ವಿಶ್ರಾಂತ ಬ್ಯಾಂಕ್ ಅಽಕಾರಿ ಈಶ್ವರ ತುರಮರಿ, ಬಸವರಾಜ ಕೌಜಲಗಿ, ಭಕ್ತರು ಇದ್ದರು.