ಜಿಲ್ಲೆ

ಉಪಜಿಲ್ಲಾ ಕಲೋತ್ಸವದಲ್ಲಿ ಮಹಾಜನ ಶಾಲೆ ಚಾಂಪಿಯನ್

ಬದಿಯಡ್ಕ: ಇತ್ತೀಚೆಗೆ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿದ ಕುಂಬಳೆ ಉಪಜಿಲ್ಲಾಮಟ್ಟದ ಶಾಲಾ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ, ಕಿರಿಯ ಪ್ರಾಥಮಿಕ ಶಾಲೆ ವಿವಿಧ ಪ್ರಶಸ್ತಿ ಪಡೆದಿದೆ.

ಪ್ರೌಢಶಾಲಾ ಸಂಸ್ಕೃತೋತ್ಸವದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟ, ಕನ್ನಡ ವಿಭಾಗದ ಸ್ಪರ್ಧೆಗಳಲ್ಲಿ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ರನ್ನರ್ಸ್ ಅಪ್, ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾರೆ. ಈ ಮೂಲಕ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ಮೂರು ಟ್ರೋಫಿಗಳನ್ನು ಪಡೆದುಕೊಂಡು ಸ್ತುತ್ಯರ್ಹ ಸಾಧನೆ ದಾಖಲಿಸಿದೆ.