ಮಹಾಗಾಂವದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸತ್ಕರಿಸಲಾಯಿತು. ಶ್ರೀ ವಿರೂಪಾಕ್ಷ ದೇವರು, ಗ್ರಾಪಂ ಅಧ್ಯಕ್ಷೆ ಮನಿಷಾ ಹರಸೂರಕರ, ಸಹಾಯಕ ಕೃಷಿ ನಿರ್ದೆಶಕ ಚಂದ್ರಕಾAತ ಜೀವಣಗಿ, ರವೀಂದ್ರ ಗುಂಡಪ್ಪಗೋಳ್, ಸುರೇಶ ಲೇಂಗಟಿ, ರಾಜಕುಮಾರ ಮಂಠಾಳೆ ಇದ್ದರು. 
ಜಿಲ್ಲೆ

ನಕಲಿ ಬೀಜ ಬಿತ್ತಿದರೆ ಇಳುವರಿ ಕುಂಠಿತ

ಕಮಲಾಪುರ: ಮುಂಗಾರು ಹಂಗಾಮಿನ ಆರಂಭದಲ್ಲಿ ರೋಹಿಣಿ ಮಳೆ ಭರ್ಜರಿ ಎಂಟ್ರಿ ಕೊಟ್ಟಿದ್ದು ಶುಭ ಸೂಚನೆ. ರೈತರು ಟ್ರೈಕೋಡರ್ಮಾ ಬಳಸಿ ಬೀಜೋಪಚಾರ ಮಾಡಿದ ಬಳಿಕ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಹೇಳಿದರು.

ಮಹಾಗಾಂವ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೃಷಿ ಇಲಾಖೆ ಶನಿವಾರ ಆಯೋಜಿಸಿದ್ದ ಸಹಾಯಕ ಕೃಷಿ ನಿರ್ದೇಶಕಿಯಾಗಿ ಪದೋನ್ನತಿ ಹೊಂದಿದ ವಿಜಯಲಕ್ಷ್ಮೀ ಜೈನಾಪುರ ಬೀಳ್ಕೊಡುಗೆ ಹಾಗೂ ಸಾಧಕ ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಗ ಬಿತ್ತುವ ಭರದಲ್ಲಿ ಯಾವುದೇ ನಕಲಿ ಬೀಜ ಪಡೆದು ಬಿತ್ತನೆ ಮಾಡಿದರೆ ಇಳುವರಿ ಕುಂಠಿತಗೊಳ್ಳಲಿದೆ ಎಂದು ಎಚ್ಚರಿಸಿದರು.

ಪರವಾನಗಿ ಪಡೆದ ಏಜೆನ್ಸಿಗಳಿಂದಲೇ ಬೀಜ ರಸಗೊಬ್ಬರ ಪಡೆಯಬೇಕು. ಕಡಿಮೆ ದರದ ಆಮಿಷಕ್ಕೆ ಒಳಗಾಗಬೇಡಿ. ನಕಲಿ ಮಾರಾಟಗಾರರು ಕಂಡಲ್ಲಿ ತಕ್ಷಣ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ವ್ಯಾಪ್ತಿಯ ಆರು ಆರ್‌ಎಸ್‌ಕೆಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಮಹಾಗಾಂವ್ ಕೇಂದ್ರ ಮಾತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ರವೀಂದ್ರ ಗುಂಡಪ್ಪಗೋಳ್, ಮಡಕಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಠಾಳೆ, ಮಜರ್ ಅಲಿ ದರ್ಜಿ, ವಿಜಯಲಕ್ಷ್ಮೀ ಜೈನಾಪುರ, ಶಿವಪುತ್ರಪ್ಪ ಮೇಗಪ್ಪಗೋಳ್ ಮಾತನಾಡಿದರು.

ಮಹಾಗಾಂವ್ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನಿಷಾ ಹರಸೂರಕರ, ಮಾಜಿ ಅಧ್ಯಕ್ಷ ನರೇಶ ಹರಸೂರಕರ, ಸಾಯಿಬಣ್ಣ ನಿಂಗದಳ್ಳಿ, ಪ್ರಭಾರಿ ಇಒ ಬಸವರಾಜ ಪಾಟೀಲ್, ಮಾರುತಿ ಘಂಟಿ, ವೀರಣ್ಣ ಕೋಟಿ, ಮಂಜುನಾಥ ಜೇವರ್ಗಿ, ಜಿಲಾನಿ ಹರಕಂಚಿ ಇತರರಿದ್ದರು. ಅಂಬಾರಾಯ ಮಡ್ಡೆ ನಿರೂಪಣೆ ಮಾಡಿದರು.

ಪ್ರಗತಿಪರ ರೈತರಾದ ಯಕ್ಕಂಚಿ ಗ್ರಾಮದ ಗುರುನಾಥ ಸೊನ್ನದ, ಅಂಬಲಗಾದ ಶಿವಪುತ್ರಪ್ಪ ಮೇಗಪ್ಪಗೋಳ್, ಸುರೇಶ ಕೊಳ್ಳುರೆ, ರವೀಂದ್ರ ಗುಂಡಪ್ಪಗೋಳ್, ಕವಿತಾಬಾಯಿ ಲೇಂಗಟಿ, ಸತೀಶ ಹೊಳಕುಂದಾ, ಭೀಮಶಾ ನೀರ್ ಹಾಗೂ ಗ್ರಾಮ ಸಹಾಯಕರನ್ನು ಸನ್ಮಾನಿಸಲಾಯಿತು.