ಜಿಲ್ಲೆ

ಗ್ರಾಪಂ ಅಧ್ಯಕ್ಷರಾಗಿ ಮಹಾದೇವಿ ಆಯ್ಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮಹಾದೇವಿ ರಾಮನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿ ಮಾಡಲಾಗಿತ್ತು. ಆದರೆ ಮಾಹಾದೇವಿ ರಾಮನಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುಣಾವಣಾಧಿಕಾರಿ ಗಂಗಾಧರ ಕಂದಕೂರ ಘೋಷಿಸಿದ್ದಾರೆ.

ಸಹಾಯಕ ಚುನಾವಣಾಧಿಕಾರಿ ಕೆ. ಎಚ್​. ಹಾವೆರಿಪೇಟ, ಉಪಾಧ್ಯಕ್ಷ ಭಾಸ್ಕರ ಬಡಿಗೇರ, ಸದಸ್ಯರಾದ ಶಂಭನಗೌಡ ಪಾಟೀಲ, ಸಂತೋಷ ಸಾವಳಗಿ, ನಿಂಗಪ್ಪ ವಾ, ಮಂಜುನಾಥ ಪಾಟೀಲ, ಕ್ಕೀರಪ್ಪ ಮಾನೋಜಿ, ಅಶ್ವಿನಿ ಹಡಪದ, ಅನ್ನರ್ಪೂಣ ಬಡಿಗೇರ, ಕರೆವ್ವ ತಳವಾರ, ಪಿಡಿಒ ರಾಮನಗೌಡ ಪಾಟೀಲ, ಕಾರ್ಯದರ್ಶಿ ಶೇಖಪ್ಪ ಮರಿತಮ್ಮನವರ, ಬಸಯ್ಯ ಹಿರೇಮಠ, ಸುನೀಲ ಪಾಟೀಲ, ಭೀಮಣ್ಣ ಅಗನೋಜಿ, ಬಸವರಾಜ ಸಾವಳಗಿ, ಕರವೀರ ಭಜಂತ್ರಿ, ನಾಗನಗೌಡ ಧಾರವಾಡ, ಶಂಕರ ಹರಿಜನ, ಬಾಳಪ್ಪ ಭೋಸಲೆ, ಗ್ರಾಮಸ್ಥರು, ಇತರರು ಇದ್ದರು.