ಜಿಲ್ಲೆ

ನೂತನ ಶಾಲಾ ಕೊಠಡಿಗೆ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಗುದ್ದಲಿ ಪೂಜೆ

ಮಹದೇವಪುರ : ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಸರ್ಜಾಪುರ ರಸ್ತೆ ದೊಡ್ಡಕನ್ನಲ್ಲಿಯ ಅಂಜನಾದ್ರಿ ಪ್ರೌಢಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 1 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರು ನೂತನ 3 ಕೊಠಡಿಗಳಿಗೆ ಶಾಸಕಿ ಮಂಜಳಾ ಲಿಂಬಾವಳಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿ, ಕ್ಷೇತ್ರ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಗ್ರಾಮದ ಹಿರಿಯರು ಸಮಾಜ ಸೇವಕರಾದ ಕೆ.ಎಂ.ಸೋಮಶೇಖರ ರೆಡ್ಡಿ, ಕೆ.ಎನ್.ವೇಣುಗೋಪಾಲ್, ಮುನಿರೆಡ್ಡಿ, ಕೆ.ವಿ.ರಾಜಶೇಖರ ರೆಡ್ಡಿ, ಸುರೇಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಂ.ನಾಗರಾಜ್, ಕಾರ್ಯದರ್ಶಿ ಎನ್.ಕೃಷ್ಣಪ್ಪ, ಮುಖ್ಯೋಪಾಧ್ಯಾಯರಾದ ಆರ್.ಶಿವಕುಮಾರ್ ಮತ್ತು ಶಾಲಾ ಸಿಬ್ಬಂದಿ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.