ಬೆಂಗಳೂರು: ಮಹದೇವಪುರ ಕ್ಷೇತ್ರದ ವರ್ತೂರಿನ ಬಿಜೆಪಿ ಮುಖಂಡರು ಹಾಗೂ ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ತಿಗಳ ಸಂಘದ ಪ್ರಧಾನಕಾರ್ಯದರ್ಶಿ ಬಿ.ಎಸ್.ಶ್ರೀಧರ್ ಅವರು ಕ್ಷೇತ್ರದ ಜನರು ಹಾಗೂ ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಿಸುವ ಮೂಲಕ ಬುಧವಾರ ತಮ್ಮ ಹುಟ್ಟುಹಬ್ಬನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಕ್ಷೇತ್ರದ 800ಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಿಸಿದರು. ಇದೇ ವೇಳೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ವರ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಭಗವದ್ಗೀತಾ ಪುಸ್ತಕಗಳು, ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಗೆ ಸೀತೆ ಸೇರಿ ವಿವಿಧ ಸೌಲಭ್ಯಗಳನ್ನು ವಿತರಿಸಿದರು.
ನಂತರ ಮಾತನಾಡಿದ ಬಿ.ಎಸ್. ಶ್ರೀಧರ್, ಮಾಜಿ ಸಚಿವ ಅರವಿಂದ ಲಿಂಬಾವಳಿರವರ ಮಾರ್ಗದರ್ಶನದಂತೆ ಸೇವಾ ಕಾರ್ಯಗಳ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ ಅವರು, ಆಡಂಬರದ ಹುಟ್ಟು ಹಬ್ಬ ದಿಂದ ದುಂದು ವೆಚ್ಚ ಮಾಡುವ ಬದಲು ಬಡಜನರಿಗೆ ನೆರವಾಗುವುದು ನಿಜವಾದ ಸೇವೆ ಎಂದರಿತು ಹಲವು ವರ್ಷಗಳಿಂದ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು.
ಕ್ಷೇತ್ರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ್, ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಕೆ.ಎನ್.ಬಾಬುರೆಡ್ಡಿ, ಕೊಡತಿ ವಾರ್ಡ್ 9 ಅಧ್ಯಕ್ಷ ಕೆ.ವಿ.ಸತೀಶ್ ರೆಡ್ಡಿ, ವಿ.ಪಿ.ರಕ್ಷಿತ್, ವರ್ತೂರು ಸಂತೋಷ್, ಬಿ.ವಿ.ಮಂಜುನಾಥ್ ಹಾಗೂ ಬಿಜೆಪಿ ಮುಖಂಡರು, ಅಭಿಮಾನಿಗಳು, ವಹ್ನಿಕುಲ ತಿಗಳ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಕೋರಿದರು.