ತಂದ್ರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಯ್ಕೆಯಾದ ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಮಹದೇವಪ್ಪ ತಂದ್ರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

ಸಾಲಿಗ್ರಾಮ: ತಾಲೂಕಿನ ತಂದ್ರೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಮಹದೇವಪ್ಪ ಆಯ್ಕೆಯಾದರು.

ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ಪ್ರಮೀಳಾ ರಮೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಚುನಾವಣೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಪ್ಪ ಮತ್ತು ಸಣ್ಣಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಸಣ್ಣಸ್ವಾಮಿ 5 ಮತ ಪಡೆದರೆ, ಮಹದೇವಪ್ಪ 10 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಮಲ್ಲಿಕಾರ್ಜುನ್ ಕರ್ತವ್ಯ ನಿರ್ವಹಿಸಿದರು. ಅಧ್ಯಕ್ಷೆ ರೇಣುಕಾ, ಸದಸ್ಯರಾದ ಮಹದೇವಪ್ಪ, ಪ್ರಮೀಳಾ, ಪವಿತ್ರ, ಸುನಿತಾ, ಲೋಕೇಶ್, ಪಾಪೇಗೌಡ, ಯೋಗೇಶ್, ಅನಿತಾ, ಸೌಂದರ್ಯ, ಸಣ್ಣಸ್ವಾಮಿ, ಲಕ್ಷ್ಮಿ , ಎಂ ಕೆ ಮಹದೇವ್, ನವೀನ, ಮಹದೇವ್, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಉಪಾಧ್ಯಕ್ಷ ಮಹಾದೇವಪ್ಪ ಮಾತನಾಡಿ, ಎಲ್ಲರನ್ನು ವಿಶ್ವಾಸ ಪಡೆದು ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು.

ನೂತನ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು, ವೀರಶೈವ ಮುಖಂಡರು ಅಭಿನಂದಿಸಿದರು. ಪಿಡಿಒ ಟಿ.ಎ.ಮಹದೇವ್, ಕಾರ್ಯದರ್ಶಿ ವಾಮನ್ ರಾವ್, ಮುಬಶಿರ ತಬಸ್ಸಂ, ಬಿಲ್ ಕಲೆಕ್ಟರ್ ಸುಂದರೇಗೌಡ, ಕಂಪ್ಯೂಟರ್ ಆಪರೇಟರ್ ಪ್ರಸನ್ನ, ವಾಟರ್‌ಮನ್ ವೆಂಕಟೇಶ್, ಮುದುಗುಪ್ಪೆ ಮಂಜುನಾಥ್, ಮೆಡಿಕಲ್ ರಾಜಣ್ಣ ದಿಲೀಪ್, ನಟರಾಜ್, ಸುನಿಲ್, ಯೋಗೇಂದ್ರ, ಮಂಜುನಾಥ್ ಇತರರು ಇದ್ದರು.