ಜಿಲ್ಲೆ

ಮಹದೇವಪ್ಪ ನೀನು ಸಖಿ ಪಾತ್ರ ಮಾಡಿದ್ದೀಯಾ?

ಮಂಜುನಾಥ ತಿಮ್ಮಯ್ಯ

ಮೈಸೂರು: ‘ಪಶು ಸಖಿ’ ಎಂಬ ಹೆಸರನ್ನು ಚೆನ್ನಾಗಿ ಇಟ್ಟಿದ್ದಾರೆ. ಗಗನಸಖಿಯಂತೆ ಪಶುಸಖಿ ಎಂದು ಸಿಎಂ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.
ನಾಟಕದಲ್ಲಿ ರಾಣಿ ಪಾತ್ರ, ಸಖಿ ಪಾತ್ರ ಇರುತ್ತದೆ. ಡಾ.ಮಹದೇವಪ್ಪ ನೀನು ಯಾವತ್ತಾದ್ರೂ ನಾಟಕದಲ್ಲಿ ಸಖಿ ಪಾತ್ರ ಮಾಡಿದ್ದೀಯಾ? ಎಂದು ಕಿಚಾಯಿಸಿದರು.


ರೈತರು-ಸರ್ಕಾರ ನಡುವೆ ಸೇತುವೆಯಾಗಿ ಪಶು ಸಖಿಯರು ಕೆಲಸ ಮಾಡುವ ಮೂಲಕ ಅನೇಕ ಸರ್ಕಾರಿ ಕಾರ್ಯಕ್ರಮ, ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಪಶು ಸಖಿಯರೂ ಜನರ ನಡುವಿದ್ದುಕೊಂಡು ಕಾರ್ಯ ಮಾಡಬೇಕು ಎಂದು ಹೇಳಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮೈಸೂರು ತಾಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪಶು ಸಖಿಯರಿಗೆ ರಾಜ್ಯಮಟ್ಟ ತರಬೇತಿ, 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ, ಪಶುಚಿಕಿತ್ಸಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಇದು ನಡೆಯಿತು.