ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಮಹಾದೇವ ಹಿಪ್ಪರಗಿ ಅಧ್ಯಕ್ಷರಾಗಿ ಹಾಗೂ ಬಸಪ್ಪ ಕೋಹಳ್ಳಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು
ಚುನಾವಣಾಧಿಕಾರಿ ಗೋವಿಂದಗೌಡ ಪಾಟೀಲ ಘೋಷಿಸಿದರು. ಅಧ್ಯಕ್ಷ ಮಹಾದೇವ ಹಿಪ್ಪರಗಿ, ಉಪಾಧ್ಯಕ್ಷ ಬಸಪ್ಪ ಕೋಹಳ್ಳಿ ಅವರನ್ನು ಸತ್ಕರಿಸಲಾಯಿತು. ಮುಖಂಡರಾದ ಸೂರ್ಯಕಾಂತ ಡಂಬಳಕರ, ಚಿದಾನಂದ ಮಠಪತಿ, ಆನಂದ ಧೂಳಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಈರಗೌಡ ಪಾಟೀಲ, ಸುಭಾಷ ಕೋಹಳ್ಳಿ, ಪರಗೊಂಡ ತಾವಂಶಿ, ಪರಸಪ್ಪ ಅಥಣಿ, ಅನಿಲ ಪಾಟೀಲ, ಮಾರುತಿ ಸನದಿ, ಜಯವಂತ ನಾಟೀಕಾರ, ಶ್ರೀಶೈಲ ಸನದಿ ಇತರರಿದ್ದರು.