ದೇವನಹಳ್ಳಿ : ಮಹಾರಾಷ್ಟ್ರದ ಮಹಾಡ್ ಸತ್ಯಾಗ್ರಹವನ್ನು ದಲಿತ ಚಳವಳಿಯ ಅಡಿಪಾಯದ ಟನೆ ಎಂದು ಪ್ರಶಂಶಿಸಲಾಗುತ್ತದೆ. ಇದು ಜಾತಿ ವ್ಯವಸ್ಥೆ, ಸಮುದಾಯದ ಸಾಮೂಹಿಕ ತಿರಸ್ಕರಿಸುವಿಕೆ ಮತ್ತು ಮಾನವ ಹಕ್ಕುಗಳ ಪ್ರತಿಪಾದನೆ ಗುರುತಿಸುತ್ತದೆ. ಹಾಗಾಗಿ ಮಹಾಡ್ ಸತ್ಯಾಗ್ರಹ ದಲಿತ ಚಳವಳಿಯಲ್ಲಿ ಹೆಗ್ಗುರುತಾಗಿದೆ ಎಂದು ಕರ್ನಾಟಕ ದಲಿತ ಸಂರ್ಷ ಸಮಿತಿಯ (ಅಂಬೇಡ್ಕರ್ ವಾದ ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಿರಿಯ ಹೋರಾಟಗಾರ ಎಚ್.ಕೆ.ವೆಂಕಟೇಶಪ್ಪ ಮತ್ತು ಜನಪರ ಹಾಡುಗಾರ್ತಿ ಕೊಯಿರಾ ಮುನಿನರಸಮ್ಮ ವೇದಿಕೆಯಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ಆಯೋಜಿಸಿದ್ದ ಶೋಷಿತರ ಸಂರ್ಷ ಸಮಾವೇಶದಲ್ಲಿ ಮಾತನಾಡಿದರು.
1927ರ ಮಾರ್ಚ್ 20ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾಡ್ನಲ್ಲಿರುವ ಕಾವ್ದಾರ್ ಟ್ಯಾಂಕ್ನಿಂದ ಕುಡಿಯುವ ನೀರಿಗಾಗಿ ಮಹಾಡ್ ಸತ್ಯಾಗ್ರಹ ಮುನ್ನಡೆಸಿದ್ದರು. ಇದು ದಲಿತ ಚಳವಳಿಯ ಮೂಲ ಹೋರಾಟ, ನೀರಿಗಾಗಿ ಚಳವಳಿ&ಮತ್ತು ಜಾತಿ ವಿನಾಶಕ್ಕಾಗಿ ಹೋರಾಟ ಆದ್ದರಿಂದ ಅವರ ಆಶಯಗಳನ್ನು ಪೂರೈಸಲು ಮೂಢನಂಬಿಕೆಗಳನ್ನು ಬದಿಗೊತ್ತಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬನ್ನಿ ಎಂದರು.
ಡಿಎಸ್ಎಸ್ ರಾಜ್ಯ ಸಂಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಕೆರೆ ನೀರನ್ನು ಮುಟ್ಟುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದನ್ನು ಸಾರಿದ್ದರು ಎಂದು ಸ್ಮರಿಸಿದರು.
ಸಮಾವೇಶದಲ್ಲಿ ಹಿರಿಯ ಹೋರಾಟಗಾರ ಎಚ್.ಕೆ.ವೆಂಕಟೇಶಪ್ಪ ಮತ್ತು ಜನಪರ ಹಾಡುಗಾರ್ತಿ ಕೊಯಿರಾ ಮುನಿನರಸಮ್ಮ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಯೋಜಕರಾದ ಚಂದ್ರಪ್ಪ .ಎಂ. ಮಿಂಡ್ಲುಮನಿ, ಕಲಾಮಂಡಳಿಯ ಮೂರ್ತಿ ಬಿಸ್ನಹಳ್ಳಿ, ರವೀಂದ್ರ ಹೊಸಕೋಟೆ, ವಿಭಾಗೀಯ ಸಂಟನಾ ಸಂಚಾಲಕರಾದ ಕೆ .ಆರ್.ಮುನಿಯಪ್ಪ, ಜಿಲ್ಲಾ ಪ್ರಧಾನ ಸಂಚಾಲಕರಾದ ಕೊರಳೂರು ಶ್ರೀನಿವಾಸ್, ಎಂ.ತಿಮ್ಮರಾಯಪ್ಪ, ರಮೇಶ್, ಪಿ.ಎಂ.ಚಿನ್ನಸ್ವಾಮಿ ಇದ್ದರು.