ಬೆಳ್ತಂಗಡಿ: ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್ ಸುವರ್ಣ ಶತಕ ಶ್ರೀ ಮಹಾಭಾರತ ಸರಣಿಯ ಮೂರನೇ ಹಂತದ ತಾಳಮದ್ದಳೆ ಕಾರ್ಯಕ್ರಮ ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.
ಪ್ರಧಾನ ಅರ್ಚಕ ಸುರೇಶ್ ಪುತ್ತೂರಾಯ ಕಾರ್ಯಕ್ರಮ ಉದ್ಘಾಟಿಸಿದರು. ಕವಿ ಶ್ರೀಧರ್ ಡಿ.ಎಸ್. ವಿರಚಿತ ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ವೈ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಪದ್ಮಾ ಕೆ.ಆರ್.ಆಚಾರ್ಯ, ಜಯಲಕ್ಷ್ಮೀ ವಿ.ಭಟ್, ಶಾಲಿನಿ ಅರುಣ ಶೆಟ್ಟಿ, ಗೀತಾ ಕೊಂಕೋಡಿ, ಪ್ರೇಮಾ ನೂರಿತ್ತಾಯ, ಸುರೇಖಾ ಅಶೋಕ ರೈ ಭಾಗವಹಿಸಿದ್ದರು.
ಕೀಚಕವಧೆ ಪ್ರಸಂಗದಲ್ಲಿ ಭಾಗವತರಾಗಿ ಕಿಶೋರ ಶೆಟ್ಟಿ ಮಡಂತ್ಯಾರು, ದಿನಕರ ಶೆಟ್ಟಿ ಅಂಕದಳ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಕಾರ್ತಿಕ್ ಪಿಲಿಗೂಡು, ಅರ್ಥಧಾರಿಗಳಾಗಿ ಪ್ರಭಾಕರ ಪಿ.ಎಂ., ವಾಸುದೇವ ಪ್ರಭು, ಪಾತಿಲ ತಿಮ್ಮಪ್ಪ ಶೆಟ್ಟಿ, ಸುರೇಶ ಶೆಟ್ಟಿ ಪುಂಜಾಲಕಟ್ಟೆ ಹಾಗೂ ಇರಾವಂತ ಕಾಳಗದಲ್ಲಿ ಭಾಗವತರಾಗಿ ಡಿ.ಕೆ.ಆಚಾರ್ಯ, ಮೋಹನ್ ಶರವೂರು, ಅರ್ಥಧಾರಿಗಳಾಗಿ ರಾವೇಂದ್ರ ಭಟ್ ತೋಟಂತ್ತಿಲ, ಗೋಪಾಲ ಭಟ್ ನೈಮಿಷ, ದಿವಾಕರ ಆಚಾರ್ಯ ಹಳೆನೇರೇಂಕಿ, ನಾರಾಯಣ ಭಟ್ ಅಲಂಕಾರು, ರಾಮಪ್ರಸಾದ್ ಅಲಂಕಾರು ಭಾಗವಹಿಸಿದ್ದರು.
ಪ್ರಮುಖರಾದ ಬಿ.ಸುಬ್ರಹ್ಮಣ್ಯ ರಾವ್, ಸುಂದರ ಶೆಟ್ಟಿ ಎಂಜಿರಪಲಿಕೆ, ಪ್ರದೀಪ ಹೆಬ್ಬಾರ್ ಚಾರ, ಪೂರ್ಣಿಮಾ ಪುತ್ತೂರಾಯ, ಸುರೇಶ ರಾವ್ ಬಿ., ಸಂಜೀವ ಪಾರೆಂಕಿ, ಕಲಾಪೋಷಕ ಉಮೇಶ ಶೆಣೈ ರಾಮನಗರ, ಸತೀಶ್ ಕುಮಾರ್, ಅನುರಾಧಾ ಸತೀಶ್, ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಕೆ.ಮಹಾಲಿಂಗೇಶ್ವರ ಭಟ್, ಪದ್ಮಾ ಕೆ.ಆರ್.ಆಚಾರ್ಯ ಪುತ್ತೂರು, ಸೂರ್ಯನಾರಾಯಣ ಪುತ್ತೂರಾಯ, ಕೃಷ್ಣಪ್ಪ ಕೆ.ಕಲ್ಲಂಡ, ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರುತಿ ವಿಸ್ಮಿತ್, ಗೀತಾ ಕುದ್ದಾಣ್ಣಾಯ, ಪದ್ಮನಾಭ ಕುಲಾಲ್ ಮೊದಲಾದವರಿದ್ದರು.