ಜಿಲ್ಲೆ

ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನ

ಮಾದೇಶ್ ತಿ.ನರಸೀಪುರ

ನಾಪೋಕ್ಲು: ಸಂಪಾಜೆ ಗ್ರಾಮದ ಅರಮನೆತೋಟ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಹಾಗೂ ಪ್ರಸಾದ ವಿತರಣೆಯೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿತು.


ರಾತ್ರಿ ದೀಪಾರಾಧನೆ ಹಾಗೂ ಶ್ರೀ ಮಹಾವಿಷ್ಣು ಮೂರ್ತಿ ದೈವದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತಂದ ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ, ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, ಬಳಿಕ ಪೊಟ್ಟನ್ ದೈವದ ಕೋಲ ನಡೆಯಿತು.ದೈವದ ಅಗ್ನಿ ಪ್ರವೇಶ, ಬಳಿಕ ದೈವದ ಮಾರಿಕಳ ಪ್ರವೇಶ, ಪ್ರಸಾದ ವಿತರಣೆ ನಡೆಯಿತು.


ಮುರಳಿ ಭಟ್ ಕೀಲಾರು, ಕೆ.ಜಿ.ಗೋಪಾಕೃಷ್ಣ ಭಟ್, ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಸೂರ್ಯನಾರಾಯಣ ಭಟ್, ದೈವಸ್ಥಾನದ ಗೌರವಾಧ್ಯಕ್ಷ ಶಬರೀಶ್ ಕುದ್ಕುಳಿ, ಅಧ್ಯಕ್ಷ ಕೊರಗಪ್ಪ ಅರಮನೆ ತೋಟ, ಕಾರ್ಯದರ್ಶಿ ಕೃಷ್ಣ ಅರಮನೆ ತೋಟ, ಉಪ ಕಾರ್ಯದರ್ಶಿ ಚಂದ್ರಶೇಖರ ಅರಮನೆ ತೋಟ , ದೈವಸ್ಥಾನದ ಪೂಜಾರಿ ಪಕೀರಾ ಅಂಬಟಕಜೆ ಹಾಗೂ ಎಚ್.ಐ.ನಾರಾಯಣ, ಖಜಾಂಚಿ ಎಚ್.ಕೆ, ಮುರಳಿ, ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಸಂಪಾಜೆ ಪಯಶ್ವಿನಿ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೈವಸ್ಥಾನದ ಕಾರ್ಯದರ್ಶಿ ಕೆ.ವಿ. ಮಂಜುನಾಥ್ ಇದ್ದರು.


ಒತ್ತೆಕೋಲದ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಗ್ರಾಮಗಳ ವಿವಿಧ ತಂಡಗಳ ನಡುವೆ ಜರುಗಿದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಆದರ್ಶ ಫ್ರೆಂಡ್ಸ್ ಚಡಾವು ಹಾಗೂ ದ್ವಿತೀಯ ಬಹುಮಾನವನ್ನು ಶ್ರೀ ವಿಷ್ಣು ಸಂಪಾಜೆ, ತೃತೀಯ ಬಹುಮಾನವನ್ನು ಪಯಸ್ವಿನಿ ಸಂಪಾಜೆ ಪಡೆದುಕೊಂಡಿತು. ಒಟ್ಟು ಆರು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.


ಶ್ರೀ ಮಹಾವಿಷ್ಣು ಮಿತ್ರ ಬಳಗದ ವತಿಯಿಂದ ದೈವಸ್ಥಾನಕ್ಕೆ ಕುರ್ಚಿ ಮತ್ತು ಮೇಜುಗಳನ್ನು ಹಸ್ತಾಂತರಿಸಲಾಯಿತು.


ಸಂಪಾಜೆ ಶಾಲೆಯಲ್ಲಿ ಮಿತ್ರ ಬಳಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಲೀಗ್ ಮಾದರಿ ಕ್ರಿಕೆಟ್ ಟೂರ್ನಿಯಲ್ಲಿ ಉಳಿಕೆ ಹಣದಿಂದ ದೇವರ ಸಾನ್ನಿಧ್ಯಕ್ಕೆ 30 ಕುರ್ಚಿ ಹಾಗೂ 3 ಮೇಜುಗಳನ್ನು ಅನ್ನು ಉಡುಗೊರೆಯಾಗಿ ನೀಡಲಾಯಿತು.


ದೈವಸ್ಥಾನದ ಪೂಜಾರಿಗಳಾದ ಪಕ್ಕಿರ ಅಂಬಟೆಕಜೆ, ನಾರಾಯಣ ಅರಮನೆತೋಟ, ಅಧ್ಯಕ್ಷ ಕೊರಗಪ್ಪ ಅರಮನೆತೋಟ, ಕಾರ್ಯದರ್ಶಿ ಎಚ್.ಐ.ಕೃಷ್ಣ, ಸಹಕಾರ್ಯದರ್ಶಿ ಚಂದ್ರಶೇಖರ, ಖಜಾಂಚಿ ಮುರಳಿ, ಶ್ರೀಮಹಾವಿಷ್ಣು ಮಿತ್ರ ಬಳಗದ ಅಧ್ಯಕ್ಷ ಜಯಕುಮಾರ್, ಸಂಚಾಲಕ ವಿಕ್ರಾಂತ್ ಇತರರು ಇದ್ದರು.