ಜಿಲ್ಲೆ

ಭಜನೆಯಿಂದ ಸಾರ್ವತ್ರಿಕ ಅಭಿವೃದ್ಧಿ : ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿಮತ : ಭಜನಾ ಸಂಕೀರ್ತನೆ

ಸೌಮ್ಯ ಆರ್

ಮೂಲ್ಕಿ: ಸಂಘಟಿತರಾಗಿ ಭಜಿಸುವ ಮೂಲಕ ದೇವರ ಕೃಪಾಶೀರ್ವಾದಗಳ ಜತೆಗೆ ಸಾರ್ವತ್ರಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶ್ರೀ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಭಜನಾ ಸಂಕೀರ್ತನೆಯ ದೀಪ ಬೆಳಗಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಅರ್ಚಕ ಶ್ರೀನಾಥ ಭಟ್, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಭುವನಾಭಿರಾಮ ಉಡುಪ, ದೊಡ್ಡಣ್ಣ ಮೊಲಿ, ಕೆ.ಸತೀಶ್ ಭಂಡಾರಿ, ರಾಮದಾಸ್ ಕಾಮತ್, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಸಾಧು ಅಂಚನ್ ಮಟ್ಟು, ತಾರಾನಾಥ ದೇವಾಡಿಗ, ಹರಿದೇವಾಡಿಗ ಮತ್ತಿತರರಿದ್ದರು.