ಪುತ್ತೂರು: ದರ್ಭೆ ದೂಮಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ೨೦೨೨-೨೦೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಬುಧವಾರ ಅಧ್ಯಕ್ಷೆ ಪಾರ್ವತಿ ಬಿ. ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.
ಕೆ.ಎಂ.ಎಫ್.ನ ವಿಸ್ತರಣಾಧಿಕಾರಿ ಮಾಲತಿ ಸೂಕ್ತ ಸಲಹೆ ಸೂಚನೆ ನೀಡಿದರು. ೨೦೨೨-೨೦೨೩ನೇ ಸಾಲಿನಲ್ಲಿ ಸಂಘವು ೧೮೧೯೩೩.೦೩ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇಕಡಾ ೧೦ ಡಿವಿಡೆಂಡ್ ಹಾಗೂ ಪ್ರತೀ ಲೀಟರಿಗೆ ೮೪ಪೈಸೆಗಳ ಬೋನಸ್ ಘೋಷಿಸಲಾಯಿತು. ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಪ್ರೊತ್ಸಾಹಕ ಬಹುಮಾನ ನೀಡಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ದೇವಕಿ ಶ್ರೀಭಟ್ ಪ್ರಾರ್ತಿಸಿದರು. ಉಪಾಧ್ಯಕ್ಷರಾದ ಸುನೀತ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಆಶಾ ಅರವಿಂದ ವರದಿ ಮಂಡಿಸಿದರು ರೇಖಮಾಲಾ ಜೆ. ವಂದಿಸಿದರು.