ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಿ0ದ ಆಂಧ್ರಪ್ರದೇಶದ ಅಧೋನಿಯಲ್ಲಿ ಆ. 24 ಮತ್ತು 25ರಂದು ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ 9ನೇ ಮಹಾಮೇಳ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಹೇಳಿದರು.
ಸಂಘದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಕನ್ನಡ ಸಂಘಗಳ ಸಹಯೋಗದಲ್ಲಿ 5 ಗೋಷ್ಠಿಗಳಲ್ಲಿ ಚಿಂತನ ಮಂಥನ ನಡೆಯಲಿದೆ. ಕವಿ ಮಿಲನ, ಸುಗಮ ಸಂಗೀತದ0ಥ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲಾ ಸ್ಪರ್ಧೆ ಇರಲಿವೆ ಎಂದರು.
ಸAಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಆ. 24ರಂದು ಬೆಳಗ್ಗೆ 10.30 ಗಂಟೆಗೆ ಚೌಕಿಮಠದ ಮರಿರಾಚೋಟಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡುವರು. ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದರು.
ಮಧ್ಯಾಹ್ನ 12ರಿಂದ ಸಂಜೆ 5 ಗಂಟೆವರೆಗೆ ಆಂಧ್ರ ಗಡಿನಾಡ ಸಾಂಸ್ಕೃತಿಕ ಶಾಸನಗಳು, ಕರ್ನಾಟಕ ಏಕೀಕರಣದಲ್ಲಿ ಕರ್ನೂಲ್ ಅನಂತಪುರ ಜಿಲ್ಲೆಯ ಹೋರಾಟ, ಹೊರನಾಡು ಕನ್ನಡಿಗರ ಕೊಡುಗೆ, ಕರ್ನಾಟಕ ಸಾಂಸ್ಕೃತಿಕ ಅಸ್ಮಿತೆ ಗೋಷ್ಠಿಗಳು ಜರುಗಲಿವೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಆ. 25ರಂದು ಬೆಳಗ್ಗೆ 10 ಗಂಟೆಯಿ0ದ ಆಂಧ್ರ ಗಡಿನಾಡ ಕನ್ನಡಿಗರ ಜ್ವಲಂತ ಸಮಸ್ಯೆಗಳು, ಗಡಿನಾಡು- ಹೊರನಾಡು ಕನ್ನಡ ಸಂಘ- ಸಂಸ್ಥೆಗಳ ಕ್ರಿಯಾಶೀಲತೆ ಕುರಿತು ಗೋಷ್ಠಿಗಳು ನಡೆಯಲಿವೆ. ಬಳಿಕ ಕವಿ ಮಿಲನ ಕಾರ್ಯಕ್ರಮ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸ0ಜೆ 4 ಗಂಟೆಗೆ ಮಹಾಮೇಳದ ಸಮಾರೋಪ ಜರುಗುವುದು. ಕನ್ನಡ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಮಾರೋಪ ಭಾಷಣ ಮಾಡುವರು. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಿವಾನಂದ ಭಾವಿಕಟ್ಟಿ ಮೇಳದ ನಿರ್ಣಯ ಮಂಡಿಸುವರು ಎಂದರು.
ಶAಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ವಡ್ಡಿನ, ಇತರರಿದ್ದರು.