ಜಿಲ್ಲೆ

ಕುಂಬಮೇಳ ಕಾಲ್ತುಳಿತಕ್ಕೆ ಮಾಜಿ ರಾಷ್ಟ್ರ ಪತಿ ಕೋವಿಂದ ಕಂಬನಿ

ಬಾಬುರಾವ ಯಡ್ರಾಮಿ

ಕಲಬುರಗಿ:  ಮಹಾ ಕುಂಭಮೇಳದಲ್ಲಿ ಭಕ್ತರು ಕಾಲ್ತುಳಿದಿಂದ ಮೃತಪಟ್ಟಿರುವ ಹಾಗೂ ಗಾಯಗೊಂಡಿರುವ ಘಟನೆಗೆ ಮಾಜಿ ರಾಷ್ಟ್ರ ಪತಿ ರಾಮನಾಥ ಕೋವಿಂದ ಕಂಬನಿ ಮಿಡಿದಿದ್ದು, ಮೃತರಿಗೆ ಶೃದ್ದಾಂಜಲಿ ಸಲ್ಲಿಸಿದ್ದಾರೆ.

ಜಿಲ್ಲೆಯ ಸೇಡಂ ಬಳಿ ಆಯೋಜನೆಗೊಂಡಿರುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕುಂಭಮೇಳ ದೊಡ್ಡ ಅನುಭಾವ ಸಂಗಮವಾಗಿದೆ ಎಂದರು.

ಉತ್ತರ ಪ್ರದೇಶದ ಪ್ರಯಾಗ ರಾಜ್ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ವಿಶ್ವದ ಗಮನ ಸೆಳೆದಿದ್ದು, ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಪಾಲ್ಗೊಂಡಿದ್ದಾರೆ. ಐದು ಕೋಟಿ ಹತ್ತು ಕೋಟಿ ಎನ್ನಲಾಗುತ್ತಿದೆ. ಕಾಲ್ತುಳಿತದಿಂದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗುತ್ತಿದೆ. ಮೃತರಿಗೆ ಶೃದ್ಧಾಂಜಲಿ ಅರ್ಪಿಸಲಾಗುವುದು ಎಂದರು.

ಈ ಹಿಂದೆ  ಕುಂಭಮೇಳಕ್ಕೆ ಹೋಗಿ ಬರಲಾಗಿದೆ. ತ್ರಿವೇಣಿ ಸಂಗಮ ಪವಿತ್ರ ಸ್ಥಳವಾಗಿದೆ. ದಕ್ಷಿಣ ಭಾರತದಲ್ಲಿ ಕಾವೇರಿ ನದಿ ಪವಿತ್ರವಾಗಿರುವಂತೆ ಗಂಗಾ ನದಿ ಪವಿತ್ರವಾಗಿದೆ ಎಂದು ಮಾಜಿ ರಾಷ್ಟ್ರ ಪತಿಗಳು ಹೇಳಿದರು.