ಜಿಲ್ಲೆ

ಮಹಾಗಣಪತಿ ದೇಗುಲದ ವಾರ್ಷಿಕೋತ್ಸವ

ಪ್ರಸಿನ್ ಕೆ.ಆರ್

ಸರಗೂರು: ಗಾಣಿಗ ಸಮಾಜದ ವತಿಯಿಂದ ಶನಿವಾರ ಪಟ್ಟಣದ ಮಹಾವೀರ ವೃತ್ತದಲ್ಲಿರುವ ಮಹಾಗಣಪತಿ ದೇವಸ್ಥಾನದ 4ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು.

ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನವನ್ನು ಹಸಿರು ತೊರಣ, ಬಣ್ಣ ಬಣ್ಣದ ರಂಗೋಲಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಧಾರ್ಮಿಕ ಕಾರ್ಯಕ್ರಮ: ದೇಗುಲದಲ್ಲಿ ಮುಂಜಾನೆ ಕಳಸ ಸ್ಥಾಪನೆ, ಶುದ್ಧಿ ಪುಣ್ಯಾಹ, ಗಣಪತಿ ಪೂಜೆ, ಗಣಪತಿ ಹೋಮ, ನವಗ್ರಹ ಪೂಜೆ, ಹೋಮ, ಬೆಳಗ್ಗೆ 9.30ಕ್ಕೆ ದೇವಾಲಯ ಸಮಿತಿಯ ಸಂಕಲ್ಪ, ಮಹಾ ಮಂಗಳಾರತಿ ನಡೆಯಿತು. ನಂತರ ಏಕಾದಶಿ ತಿಥಿ, ಬಲಮುರಿ ಸಿದ್ಧಿ ವಿನಾಯಕ ಸ್ವಾಮಿಯ ಪೂಜೆ, ಸ್ವಾಮಿಗೆ ಪಂಚಾಮೃತ ಅಭಿಷೇಕ ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ಅನ್ನಸಂತರ್ಪಣೆ ಮಾಡಲಾಯಿತು.

ಸಂಜೆ 7 ಗಂಟೆಯಿಂದ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗಾಣಿಗ ಸಮುದಾಯದ ಸೇವಾಭಿವೃದ್ಥಿ ಟ್ರಸ್ಟ್ ಅಧ್ಯಕ್ಷ ಶಿವಲಿಂಗಶಟ್ಟಿ, ಉಪಾಧ್ಯಕ್ಷ ಎಸ್.ಸಿ.ವೆಂಕಟರಾಮು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಯಜಮಾನರಾದ ಸೋಮಶಟ್ಟಿ, ಮಹದೇವ ಶೆಟ್ಟಿ, ಮುಖಂಡರಾದ ಶಿವಣ್ಣ, ಕೃಷ್ಣಶಟ್ಟಿ, ನಾಗಶಟ್ಟಿ, ಗಣಿ ರಾಜೇಶ್, ಡ್ರೈವರ್ ವೆಂಕಟೇಶ್, ನಾಗಣ್ಣ, ವೆಂಕಟೇಶ್, ಶ್ರೀನಿವಾಸ, ಕೆಂಡಗಣ್ಣ, ಕಾರಯ್ಯ, ಹುಚ್ಚಪ್ಪ, ಜಯರಾಮ್, ಮಹದೇವ, ಬಸವರಾಜು ಭಾಗವಹಿಸಿದ್ದರು.