ಕುಶಾಲನಗರ:
ತಲಕಾವೇರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥೋದ್ಭವ ಹಿನ್ನೆಲೆಯಲ್ಲಿ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಕಾವೇರಿ ಆರತಿ ಕ್ಷೇತ್ರದಲ್ಲಿ ಗುರುವಾರ ಜೀವನದಿಗೆ 164ನೇ ಮಹಾ ಆರತಿ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಕೃಷ್ಣಮೂರ್ತಿ ಭಟ್ ಬೆಳಗ್ಗೆ 7 ಗಂಟೆಯಿAದ ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಮಂಡೆಪAಡ ಬೋಸ್ ಮೊಣ್ಣಪ್ಪ, ಡಿ. ಆರ್. ಸೋಮಶೇಖರ್, ವಿ. ಡಿ. ಪುಂಡರೀಕಾಕ್ಷ, ಧರಣಿ ಸೋಮಯ್ಯ, ಎ. ಪಿ. ಸುಬ್ಬಯ್ಯ ಹಾಗೂ ಸ್ಥಳೀಯ ದೇವಾಲಯಗಳ ಸಮಿತಿ ಸದಸ್ಯರು ಇದ್ದರು.