ಮಂಗಳೂರು: ಮಂಗಳೂರಿನ ಕುಮಾರ್ ಇಂಟರ್ ನ್ಯಾಷನಲ್ ಹೋಟೆಲ್ನಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದ ಯುವತಿ ಮೇಲೆ ಆಕೆಯ ಮಾಜಿ ಲವರ್ನ ಗ್ಯಾಂಗ್ ದಾಳಿ ಮಾಡಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಯುವತಿಯ ಮಾಜಿ ಲವರ್ ತ್ರಿಶೂಲ್(19), ಸಂತೋಷ್ ಪೂಜಾರಿ (19), ಡ್ಯಾನಿಶ್ ಅರೆನ್ ಡಿಕ್ರೋಸ್ (18) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ತ್ರಿಶೂಲ್ ಜತೆ ಲವ್ ಬ್ರೇಕ್ ಆಪ್ ಮಾಡಿಕೊಂಡು ರಿಂಗ್ ವಾಪಸ್ ಕೊಟ್ಟು ಹೋಗಿದ್ದ 18 ವರ್ಷದ ಯುವತಿ ಜ.30ರಂದು ಮತ್ತೊಬ್ಬ ಯುವಕನ ಜೊತೆ ಹೋಟೆಲ್ನಲ್ಲಿ ಬರ್ತ್ ಡೇ ಪಾರ್ಟಿ ಮಾಡಿಕೊಳ್ಳುತ್ತಿದ್ದಳು. ಈ ವೇಳೆ ಆಕೆಯ ಜತೆಯಲ್ಲಿ ಕೆಲ ಸ್ನೇಹಿತರೂ ಇದ್ದರು. ಇದನ್ನೂ ಓದಿರಿ ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!
ಇದೇ ವೇಳೆ ಹೋಟೆಲ್ಗೆ ತನ್ನ ಸ್ನೇಹಿತರೊಂದಿಗೆ ನುಗ್ಗಿದ್ದ ತ್ರಿಶೂಲ್, ಮಾಜಿ ಪ್ರೇಯಸಿ ಜೊತೆಯಿದ್ದ ಪ್ರತೀಕ್ಷ್ ಎಂಬಾತನಿಗೆ ಚೂರಿಯಿಂದ ಇರಿದಿದ್ದಾನೆ. ಪ್ರತೀಕ್ಷ್ಗೆ ನಾಲ್ಕು ಕಡೆ ಚೂರಿಯಿಂದ ಇರಿಯಲಾಗಿದ್ದು, ಜತೆಯಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯ ದೃಷ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತನ್ನೊಂದಿಗೆ ಲವ್ ಬ್ರೇಕ್ ಆಪ್ ಮಾಡಿಕೊಂಡು ಮತ್ತೊಬ್ಬನೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿಕೊಳ್ಳುತ್ತಿರುವುದನ್ನ ಸಹಿಸದೆ ಮಾರಣಾಂತಿಕ ಹಲ್ಲೆ ಮಾಡಿದ ಭಗ್ನ ಪ್ರೇಮಿ ಇದೀಗ ಸಹಚರರೊಂದಿಗೆ ಮಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.