?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಮಾಗಡಿ ತಿರುಮನೆ ಉದ್ಯಾನವನಕ್ಕೆ ಬೇಕಿದೆ ಕಾಯಕಲ್ಪ

ಗಂಗಾಧರ ಬಿ ವಿ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ತೀರಾ ಹಿಂದುಳಿದಿದ್ದ ಪಟ್ಟಣ ಪುರಸಭೆಯ 5ನೇ ವಾರ್ಡ್ ತಿರುಮಲೆ ಈಗ ಅಭಿವೃದ್ಧಿಯತ್ತ ಸಾಗಿದೆ. ಕಳೆದ 20 ವರ್ಷಗಳಿಂದ ವಾರ್ಡ್‌ನಲ್ಲಿ ಪ್ರಮುಖವಾಗಿ ರಸ್ತೆ, ಚರಂಡಿ, ದೀಪ, ಕುಡಿಯುವ ನೀರಿನ ಸೌಲಭ್ಯ ಮರೀಚಿಕೆಯಾಗಿತ್ತು. ಆದರೆ, ಈಗ ಎಲ್ಲವೂ ಅಭಿವೃದ್ಧಿ ಕಂಡಿದ್ದರೂ ಮತ್ತಷ್ಟು ಕೆಲಸಗಳಾಗಬೇಕಿದೆ.

ಪ್ರಮುಖವಾಗಿ ವಾರ್ಡ್‌ನ ಚೌಡೇಶ್ವರಿ ದೇವಾಲಯದ ಬಳಿ ಒಳಚರಂಡಿ ಕಾಮಗಾರಿ ಸಮರ್ಪಕವಾಗಿರದೆ ಸಮಸ್ಯೆಯಿದೆ. ಆಗಾಗ ಕಟ್ಟಿಕೊಂಡು ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯ ನಡೆಸಬೇಕಿದೆ. ಮತ್ತೊಂದೆಡೆ ಈ ಭಾಗದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಅಗತ್ಯವಾಗಿದೆ. ವಾರ್ಡ್‌ನಲ್ಲಿರುವ ದೇವರ ದಾಸಿಮಯ್ಯ ಉದ್ಯಾನವನ ಅವ್ಯವಸ್ಥೆಯಿಂದ ಕೂಡಿದ್ದು ಅಭಿವೃದ್ಧಿಗೆ ಪುರಸಭೆ ಕ್ರಮ ಕೈಗೊಳ್ಳಬೇಕಿದೆ.

ಶೇಷಗಿರಿ, ನಾಗೇಶಪ್ಪ ಮನೆಯ ರಸ್ತೆಗೆ ನಗರೋತ್ಥಾನ ಯೋಜನೆಯಡಿ ಜಲ್ಲಿ ಹಾಕಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಂದ ಸಾರ್ವಜನಿಕರು, ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪುರಸಭೆ ಸದಸ್ಯ ಜೆಡಿಎಸ್‌ನ ಕೆ.ಕೆ. ಕಾಂತರಾಜು ಅವರು ವಾರ್ಡ್‌ನ ವಾರ್ಡ್‌ನ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ವಾರ್ಡ್‌ನ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಿದ್ದು, ಮಂಚನಬೆಲೆ ಜಲಾಶಯದ ನೀರು ಮತ್ತು ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ವಾರ್ಡ್‌ನಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ.

ಅನೇಕರಿಗೆ ವಾಸಿಸಲು ಸೂರಿಲ್ಲ

ವಾರ್ಡ್‌ನ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಂತ ಮನೆಯಿಲ್ಲ. ಸ್ವಂತ ಸೂರು ಹೊಂದುವ ಆಸೆಯೊಂದಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಪುರಸಭೆ ಸ್ಪಂದಿಸಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂಬುದು ಸೂರಿಲ್ಲದವರ ಆರೋಪವಾಗಿದೆ.

===========

ಜನಸಂಖ್ಯೆ 1800

ವಾರ್ಡ್ ನಿವಾಸಿಗಳ ಪೈಕಿ ಹೆಚ್ಚಿನವರು ಕೂಲಿಕಾರ್ಮಿಕರು, ನೇಕಾರರು, ಗಾರ್ಮೆಂಟ್ಸ್ ಉದ್ಯೋಗಿಗಳು. ಒಟ್ಟು ಜನಸಂಖ್ಯೆ 1800. ಈ ಪೈಕಿ 1200 ಮತದಾರರಿದ್ದಾರೆ.

ವಾರ್ಡ್ ವ್ಯಾಪ್ತಿ

ಎಎಸ್‌ಬಿ ಲೇಔಟ್, ಹರಿಜನ ಕಾಲನಿ, ಗರಡಿ ಮನೆ ಬೀದಿ, ದೇವಾಂಗ ಬೀದಿ, ಮುಳುಕಟ್ಟಮ್ಮ ದೇವಾಲಯದ ಬೀದಿಗಳು, ದೇವರ ದಾಸಿಮಯ್ಯ ಬೀದಿ

ದೇವಾಲಯ, ಕಚೇರಿಗಳು

ಬಿಲ್ವಪತ್ರೆ ಆಂಜನೇಯ ದೇವಾಲಯ, ಮುಳುಕಟ್ಟಮ್ಮ ದೇವಾಲಯ, ಮಾಂಡವ್ಯ ಗುಹೆ, ಕೆಂಪಣ್ಣ ಗವಿಮಠ, ಸಹ್ಯಾದ್ರಿ ಆಂಜನೇಯ ದೇವಾಲಯ, ನಮ್ಮ ಕ್ಲಿನಿಕ್, ಗರಡಿ ಮನೆ, ಬ್ಯಾಂಕ್ ಆಫ್ ಬರೋಡಾ, ಸರ್ಕಾರಿ ಶಾಲೆ.

ಉದ್ಯಾನವನಕ್ಕೆ ಬೇಕು ಕಾಯಕಲ್ಪ

ವಾರ್ಡ್‌ನಲ್ಲಿ ದೇವರ ದಾಸಿಮಯ್ಯ ಹೆಸರಿನ ಉದ್ಯಾನವನ ಇದ್ದು, ಇದರ ಸುತ್ತಲೂ ಅಳವಡಿಸಿರುವ ಕಬ್ಬಿಣದ ಗ್ರಿಲ್, ಮಕ್ಕಳ ಆಟದ ಉಪಕರಣಗಳು ಕಿತ್ತುಹೋಗಿವೆ. ವಾಯವಿಹಾರಿಗಳು ಕುಳಿತುಕೊಳ್ಳಲು ಅಳವಡಿಸಿದ್ದ ಕುರ್ಚಿಗಳು ನೆಲಕ್ಕುರುಳಿವೆ. ಸಾರ್ವಜನಿಕರ ಅನುಕೂಲಕ್ಕೆ ಇರುವ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಿ ಸೂಕ್ತ ನಿರ್ವಹಣೆ ಮಾಡಲು ಪುರಸಭೆ ಮುಂದಾಗಬೇಕಿದೆ ಎನ್ನುವುದು ವಾರ್ಡ್ ನಿವಾಸಿಗಳು ಒತ್ತಾಸೆಯಾಗಿದೆ.

ವಿನಾಶದ ಅಂಚಿನಲ್ಲಿ ಗಡಿಗೋಪುರ

ಮಾಂಡವ್ಯ ಗುಹೆ, ಕೆಂಪಣ್ಣ ಗವಿಮಠದ ಮೇಲಿರುವ ಕೆಂಪೇಗೌಡರ ಕಾವಲಿನ ಗಡಿ ಗೋಪುರ ವಿನಾಶದ ಅಂಚಿನಲ್ಲಿದೆ. ಇದರ ಈ ಮರು ನಿರ್ಮಾಣಕ್ಕೆ ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರ ಗಮನ ಹರಿಸಿ ಕೆಂಪೇಗೌಡರ ಕಾಲದ ಗೋಪುರವನ್ನು ಸಂರಕ್ಷಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕಿದೆ

ಏನೇನು ಬೇಕಾಗಿದೆ?

* ಸ್ಥಳಿಯವಾಗಿ ಉದ್ಯೋಗ

* ಅಂಗನವಾಡಿ ಕೇಂದ್ರ

* ಉದ್ಯಾನವನ ಅಭಿವೃದ್ದಿ

* ಶುದ್ಧ ಕುಡಿಯುವ ನೀರಿನ ಘಟಕ

* ಸೋಲಾರ್ ದೀಪಗಳು

ವಾರ್ಡ್‌ನ ಮತ್ತಷ್ಟು ಅಭಿವೃದ್ದಿಗೆ ಅನುದಾನದ ಕೊರತೆ ಇದೆ. ಶಾಸಕರು 1 ಕೋಟಿ ರೂ. ಅನುದಾನ ನೀಡಿದರೆ ವಾರ್ಡ್ ಸಂಪೂರ್ಣ ಅಭಿವೃದ್ದಿ ಪಡಿಸಿ ಮಾದರಿ ವಾರ್ಡ್ ಮಾಡಲಾಗುವುದು.

ಕೆ.ಕೆ. ಕಾಂತರಾಜು, ಪುರಸಭೆ ಸದಸ್ಯ

*ವಾರ್ಡ್ ಸಂಖ್ಯೆ 5, ಸದಸ್ಯ: ಕೆ.ಕೆ. ಕಾಂತರಾಜು, ಮೊಬೈಲ್ ಸಂಖ್ಯೆ 7996728761*

ನಾಗರಿಕರು ವಾಸಿಸಲು ಬೇಕಾದ ಎಲ್ಲ ಸೌಲಭ್ಯಗಳು ವಾರ್ಡ್‌ನಲ್ಲಿದೆ. ವಾರ್ಡ್ ಸಾಕಷ್ಟು ಅಭಿವೃದ್ದಿಯಾಗಿದೆ, ನಾಗರಿಕರ ಮೂಲಸೌಕರ್ಯದ ಭರವಸೆಗೆ ಪೂರಕವಾಗಿ ಸದಸ್ಯರು ಶ್ರಮಿಸುತ್ತಿದ್ದಾರೆ

ರಾಜು, ವಾರ್ಡ್ ನಿವಾಸಿ