ಜಿಲ್ಲೆ

ಮಠದ ತತ್ವಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮಠಾಧೀಶ

ಲಿಂಗೈಕ್ಯ ಶಿವರುದ್ರ ಸ್ವಾಮೀಜಿ ಸ್ಮರಿಸಿದ ಸಿದ್ದಲಿಂಗ ಸ್ವಾಮೀಜಿ ಬಂಡೆಮಠದ ನೂತನ ಶ್ರೀಗಳ ಪುರಪ್ರವೇಶ

ಮಾಗಡಿ
ಸಣ್ಣ ಮಠಗಳಿಗೂ ಮಾರ್ಗದರ್ಶಕರಾಗಿ ಮಠದ ತತ್ವಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಮಠಾಧೀಶ ಲಿಂಗೈಕ್ಯ ಶಿವರುದ್ರ ಸ್ವಾಮೀಜಿ. ಬಂಡೆ ಮಠದಲ್ಲಿ ಮಹಾಲಿಂಗೇಶ್ವರ ಸ್ವಾಮಿ ದೇವಾಲಯ ನಿರ್ಮಾಣ ಹಾಗೂ ಸಾಕಷ್ಟು ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ಥಕ ಕಾಯಕ ಧರ್ಮವನ್ನು ಪಾಲಿಸಿದ್ದರು ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸ್ಮರಿಸಿದರು.

ಮಾಗಡಿ ತಾಲೂಕಿನ ಸೋಲೂರಿನ ಕಂಚುಗಲ್​ ಬಂಡೆ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀಗಳ 26ನೇ ವರ್ಷದ ಸಂಸ್ಮರಣೋತ್ಸವ ಮತ್ತು ನೂತನ ಕಂಚುಗಲ್​ ಬಂಡೆ ಮಠದ ಸ್ವಾಮೀಜಿಗಳ ಪುರ ಪ್ರವೇಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಂಚುಗಲ್​ ಬಂಡೆ ಮಠಕ್ಕೆ ಹೊಸ ಉತ್ತರಾಧಿಕಾರಿಯನ್ನು ಹುಡುಕುವ ಕೆಲಸವನ್ನು ಸಿದ್ಧಗಂಗಾ ಮಠ ಮಾಡಿ ನಮ್ಮ ಮಠದಲ್ಲಿಯೇ ಪಟ್ಟಾಭಿಷೇಕ ಮಾಡಿ ಈಗ ನೂತನ ಮಠಾಧೀಶರಿಗೆ ವೇದ, ಸಂಸತ ಹಾಗೂ ಶಾಸಗಳ ಅಧ್ಯಯನವನ್ನು ಮಾಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮಾಗಡಿ ಶಾಸಕ ಎಚ್​.ಸಿ ಬಾಲಕೃಷ್ಣ ಮಾತನಾಡಿ, ಸೋಲೂರು ಹೋಬಳಿಯ ಕಂಚುಗಲ್​ ಬಂಡೆ ಮಠದಲ್ಲೂ ನೂರಾರು ವಿದ್ಯಾರ್ಥಿಗಳು ಆಶ್ರಯ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಸಿದ್ಧಗಂಗಾ ಮಠದ ಮಾದರಿಯನ್ನೇ ಅನುಸರಿಸಿ ಮಠವನ್ನು ಮುನ್ನಡೆಸುವ ಜವಾಬ್ದಾರಿ ಶ್ರೀಗಳ ಮೇಲಿದೆ ಎಂದು ತಿಳಿಸಿದರು.

ನೆಲಮಂಗಲ ಶಾಸಕ ಶ್ರೀನಿವಾಸ್​ ಮಾತನಾಡಿ, ಕಂಚುಗಲ್​ ಬಂಡೆ ಮಠದ ವಿದ್ಯಾರ್ಥಿ ನಿಲಯಕ್ಕೆ ಶಾಸಕರ ಅನುದಾನದಲ್ಲಿ ನೆರವು ನೀಡುವುದಾಗಿ ಭರವಸೆ ಕೊಟ್ಟರು.

ಕಿರಿಯ ಶ್ರೀಗಳಾದ ಮಹಾಲಿಂಗ ಸ್ವಾಮೀಜಿಗಳನ್ನು ಶಾಸ್ತ್ರೋಕ್ತವಾಗಿ ಪೂರ್ಣಕುಂಭ ಕಳಸ ಮತ್ತು ಮಂಗಳವಾದ್ಯಗಳ ಮೂಲಕ ಬರಮಾಡಿಕೊಳ್ಳಲಾಯಿತು, ಬಳಿಕ ಮಠದ ಪೀಠದಲ್ಲಿ ಕೂರಿಸಿ ಪಾದಪೂಜೆ ನೆರವೇರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಶಿವರುದ್ರ ಸ್ವಾಮೀಜಿಗಳ ಗದ್ದುಗೆಗೆ ಅಭಿಷೇಕ ನೆರವೇರಿಸಲಾಯಿತು. ಗುರುವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ಗದ್ದಿಗೆ ಮಠದ ಮಹಾಂತ ಸ್ವಾಮೀಜಿ, ದೇಗುಲಮಠದ ಶ್ರೀಗಳು, ನೆಲಮಂಗಲದ ಪವಾಡ ಬಸವಣ್ಣ ದೇವರ ಮಠ, ಗುಮ್ಮಸಂದ್ರ ಮಠ ಹಾಗೂ ಬೆಟ್ಟಳ್ಳಿ ಮಠ, ಬೆಂಗಳೂರಿನ ದೊಡ್ಡ ಮಠ ಸೇರಿ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಿಬಿಎಂಪಿ ಮಾಜಿ ಮೇಯರ್​ ಗಂಗಾಂಬಿಕೆ, ಬೆಂಗಳೂರು ಜಿಪಂ ಮಾಜಿ ಅಧ್ಯರಾದ ಮರಿಸ್ವಾಮಿ, ಬಿ.ಎಸ್​. ಪುಟ್ಟರಾಜು, ಶಿಕರಾದ ಗುರುಮೂರ್ತಿ, ಕೆ.ಪಿ.ಆನಂದ್​, ಶಿವಪ್ರಸಾದ್​, ಕಾಂತರಾಜು, ರಮೇಶ್​ ಇತರರು ಹಾಜರಿದ್ದರು.