ಮಾಗಡಿ: ಆನೆ ದಂತದಿಂದ ತಯಾರಿಸಿದ ಕಲಾಕೃತಿ, ಚಿರತೆ ಉಗುರು ಮಾರಾಟಕ್ಕೆ ಯತ್ನಿಸಿದ ಒಬ್ಬನನ್ನು ಸಿಐಡಿ ಅರಣ್ಯ ಟಕದವರು ತಾಳೆಕೆರೆ ಹ್ಯಾಂಡ್‌ಪೋಸ್ಟ್ ಬಳಿ ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಅರಸೀಕರೆ ತಾಲೂಕಿನ ಬೈರೇಗೌಡನಹಳ್ಳಿಯ ನವೀನ್ ಬಂಧಿತ. ಈತನಿಗೆ ಆನೆ ದಂತ ಎಲ್ಲಿ ಸಿಕ್ಕಿದೆ ಎಂಬ ಮಾಹಿತಿ ಇಲ್ಲ. ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.