ಮಾಗಡಿ: ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ಎಚ್.ಸಿ.ಬಾಲಕಷ್ಣ ಅವರು ಶಾಸಕರಾಗಿ ಶ್ರೀ ರಂಗನಾಥಸ್ವಾಮಿ ಹೆಸರಿನಲ್ಲಿ ಪ್ರವಾಣ ವಚನ ಸ್ವೀಕರಿಸಿದರು.
5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರು ಬುಧವಾರ ವಿಧಾನಸೌಧದ ಸಭಾಧ್ಯಕ್ಷರ ಕೊಠಡಿಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಸಮ್ಮುಖದಲ್ಲಿ ಪ್ರವಾಣ ವಚನ ಸ್ವೀಕರಿಸಿದರು. ಎಚ್.ಸಿ. ಬಾಲಕಷ್ಣ ರಾಜಕೀಯ ಕುಟುಂಬದಿಂದ ಬಂದಿದ್ದು, ಎಂಬಿಬಿಎಸ್ ವ್ಯಾಸಂಗ ವಾಡುತ್ತಿದ್ದಾಗ ತಂದೆ ಚನ್ನಪ್ಪ ನಿಧನರಾದ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು.
ಚನ್ನಪ್ಪ ಅವರು ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಚ್.ಸಿ. ಬಾಲಕಷ್ಣ ಪ್ರಥಮ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ನಂತರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಜೆಡಿಎಸ್‌ನಿಂದ ಮೂರು ಬಾರಿ ಶಾಸಕರಾಗಿದ್ದರು. ಈಗ ಕಾಂಗ್ರೆಸ್ ಪಕ್ಷದಿಂದ 5ನೇ ವಿಧಾನಸಭೆ ಪ್ರವೇಶಿಸಿದ್ದಾರೆ.