ಜಿಲ್ಲೆ

ಮಕ್ಕಳಲ್ಲಿ ಮೌಲ್ಯ, ಭಕ್ತಿ ಬೆಳೆಸುವ ಅದ್ಭುತ ಸಾಧನ : ಪಿ.ಜಿ.ರವಿಕಾಂತ್ ಭಟ್ ಹೇಳಿಕೆ

ಕಿನ್ನಿಗೋಳಿ: ಕೃಷ್ಣ ವೇಷಧಾರಣೆ ಸ್ಪರ್ಧೆ ಮಾತ್ರವಲ್ಲ, ನಮ್ಮ ಸಂಸ್ಕೃತಿ ಸಂಪ್ರದಾಯಗಳ ಜೀವಂತ ಸಾಗರವೇ ಹೌದು. ಕೃಷ್ಣನ ಕ್ರೀಡೆ ಮಕ್ಕಳಲ್ಲಿ ಮೌಲ್ಯ, ಭಕ್ತಿ ಮತ್ತು ನೈತಿಕತೆ ಬೆಳೆಸುವ ಅದ್ಭುತ ಸಾಧನ ಎಂದು ಉದ್ಯಮಿ ಪಿ.ಜಿ.ರವಿಕಾಂತ್ ಶಾಲಿನಿ ಭಟ್ ಹೇಳಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಮಧುರಾ ಕೃಷ್ಣ 2025 ಮುಕ್ತ ಕೃಷ್ಣ ವೇಷಧಾರಣಾ ಸ್ಪರ್ಧೆಯ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಕೋಶಾಧಿಕಾರಿ ಕೆ.ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.

ತೀರ್ಪುಗಾರರಾದ ಶ್ರೀ ವಲ್ಲಿ ಪ್ರಸಾದ್, ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕಿನ ಅಧ್ಯಕ್ಷೆ ಪದ್ಮಾಶ್ರೀ ಭಟ್ ನಿಡ್ಡೋಡಿ, ಉಡುಪಿ ಆರಾಧ್ಯ ಆರ್ಟ್ಸ್‌ನ ಶಶಿಧರ ಆಚಾರ್ಯ ಕೊಳಲಗಿರಿ, ನೃತ್ಯ ನಿರ್ದೇಶಕ ಭಜನಾ ಕುಣಿತ ತರಬೇತುದಾರ ಶ್ರವಣ್ ಕುಮಾರ್ ಪಡುಬಿದ್ರಿ ಅವರನ್ನು ಗೌರವಿಸಲಾಯಿತು. ಕಂದ ಕೃಷ್ಣ, ಮುದ್ದು ಕೃಷ್ಣ, ಬಾಲ ಕೃಷ್ಣ, ರಾಧಾ ಕೃಷ್ಣ ಹಾಗೂ ಯಶೋದಾ ಕೃಷ್ಣ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಅಧ್ಯಕ್ಷ ಅನಿಲ್ ಕುಮಾರ್, ಕಿನ್ನಿಗೋಳಿ ತನು ಇಲೆಕ್ಟ್ರಿಕಲ್ಸ್ ಮಾಲೀಕ ಅಜಿತ್ ಕುಮಾರ್ ಕೆರೆಕಾಡು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮನಾ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದರು. ಪ್ರಾಚಾರ್ಯ ಜಿತೇಂದ್ರ ವಿ.ರಾವ್ ಹೆಜಮಾಡಿ ವಂದಿಸಿದರು. ಉಪ ಪ್ರಾಚಾರ್ಯ ದಿವ್ಯಾ ಟಿ.ಶೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು. ಸಹ ಶಿಕ್ಷಕಿ ನಿಶ್ಮಿತಾ ನಿರೂಪಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವ ಜೀವನಪರ್ಯಂತ ಸ್ಮರಣೀಯವಾಗಿ ಉಳಿಯಲಿದೆ. ಇಂಥ ಪವಿತ್ರ ಸಾಂಸ್ಕೃತಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋದಾಗ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲ, ಸಂಸ್ಕೃತಿ ಹರಿಕಾರರಾಗಿಯೂ ಬೆಳಗುತ್ತಾರೆ. ಕೆ.ಭುವನಾಭಿರಾಮ ಉಡುಪ ಕೋಶಾಧಿಕಾರಿ, ಶಿಮಂತೂರು ಶ್ರೀ ಶಾರದಾ ಸೊಸೈಟಿ