ಜಿಲ್ಲೆ

ಸೌಜನ್ಯ ಕೊಲೆ ಆರೋಪಿಗಳ ಬಂಧಿಸಿ

ಧನಂಜಯ ಎಸ್.ಹಕಾರಿ.

ಹೊಳಲ್ಕೆರೆ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು ಹನ್ನೊಂದು ವರ್ಷ ಕಳೆದಿವೆ.

ಆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮದಕರಿ ನಾಯಕ ಯುವ ಸೇನಾ ಸಮಿತಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ಸಮಿತಿ ಅಧ್ಯಕ್ಷ ರಾಜಣ್ಣ ಹಿರೇಕಂದವಾಡಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಧರ್ಮಸ್ಥಳದಲ್ಲಿ 11 ವರ್ಷದ ಹಿಂದೆ ಸೌಜನ್ಯ ಎಂಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ ಅಮಾನುಷವಾಗಿ ಕೊಲೆ ಮಾಡಲಾಗಿದೆ.

ಶೀಘ್ರ ಅಪರಾಧಿಗಳನ್ನು ಬಂಧಿಸಿ ಅತ್ಯುಗ್ರ ಶಿಕ್ಷೆ ನೀಡಬೇಕು. ಇದರೊಂದಿಗೆ ಸಂತ್ರಸ್ಥೆಯ ಕುಟುಂಬಸ್ಥರಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.