ಜಿಲ್ಲೆ

ಭಗವಂತನ ಅನುಗ್ರಹವಿದ್ದಲ್ಲಿ ಕಾರ್ಯ ಸಲೀಸು - ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಎಂ. ಪದ್ಮನಾಭ ಪೈ ಅನಿಸಿಕೆ

Mangaluru - Nishantha Narayana

ವಿಟ್ಲ: ಜೀರ್ಣೋದ್ಧಾರ ಕಾರ್ಯ ಮಾತು ಕಮ್ಮಿಯಾಗಿ ಕೆಲಸ ಹೆಚ್ಚು ಮಾಡಬೇಕು. ಜವಾಬ್ಧಾರಿ ತೆಗೆದುಕೊಂಡ ಮೇಲೆ ಶ್ರದ್ಧೆಯಿಂದ ಕೆಲಸ ಮಾಡಬೇಕು. ಭಗವಂತನ ಅನುಗ್ರಹವಿದ್ದರೆ ಅಸಾಧ್ಯ ಎಂಬಂತಹ ಕೆಲಸಗಳೂ ಸಲೀಸಾಗಿ ನಡೆಯುತ್ತವೆ ಎಂದು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಎಂ. ಪದ್ಮನಾಭ ಪೈ ಹೇಳಿದರು.

ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ದೇವಸ್ಥಾನದ ಗರ್ಭಗುಡಿ ಮತ್ತು ನಮಸ್ಕಾರ ಮಂಟಪದ ಶಿಲಾಮಯ ಕೆಲಸಕಾರ್ಯಗಳ ಪ್ರಯುಕ್ತ ಶಿಲ್ಪಿಗಳಿಗೆ ತಾಂಬೂಲ ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಟ್ ಮಾತನಾಡಿ ಸಂಪತನ್ನು ಧರ್ಮ ಕಾರ್ಯದಲ್ಲಿ, ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಿಗುವ ಭಾಗ್ಯದಲ್ಲಿ ಪ್ರತಿಯೊಬ್ಬರು ಭಾಗವಹಿಸಿ, ದೇವರ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.


ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನದ ಗರ್ಭಗುಡಿ ಮತ್ತು ನಮಸ್ಕಾರ ಮಂಟಪದ ಶಿಲಾಮಯ ಕೆಲಸಕಾರ್ಯಗಳ ಪ್ರಯುಕ್ತ ಕುಂಟುಕುಡೇಲು ರಘುರಾಮ ತಂತ್ರಿ ಅವರು ಶಿಲ್ಪಿ ಕಾರ್ಕಳ ಕುಕ್ಕುಂದೂರು ಜಗದೀಶ್ ಅವರಿಗೆ ತಾಂಬೂಲ ಕೊಡುವ ಕಾರ್ಯ ನಡೆಯಿತು.


ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಹೇಶ್ ಮಡಿಯಾಲ, ಆರ್ಥಿಕ ಸಮಿತಿ ಸಂಚಾಲಕ ಸತೀಶ್ ಆಳ್ವ, ವಕೀಲ ಈಶ್ವರ ಭಟ್ ನಗ್ರಿಮೂಲೆ, ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ಪ್ರಕಾಶ್ ವಧ್ವ ಮತ್ತಿತರರು ಉಪಸ್ಥಿತರಿದ್ದರು.


ಪ್ರೇಮಾ ಗೋವಿಂದ ಪ್ರಕಾಶ್ ವಧ್ವ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಭಾಸ್ಕರ ಮಡಿಯಾಲ ಸ್ವಾಗತಿಸಿದರು. ಸಂಚಾಲಕ ಕಾನ ಈಶ್ವರ ಭಟ್ ಪ್ರಸ್ತಾವನೆಗೈದರು. ಎ. ಪಿ. ಜಯರಾಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.