ವಿಟ್ಲ: ಧರ್ಮ ಶ್ರದ್ಧೆ ಉಳಿಯಲು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಗತ್ಯವಿದೆ. ಸಂಕಲ್ಪ ಸಾಕಾರಗೊಳ್ಳಲು ಭಗವಂತನ ಅನುಗ್ರಹ ಅಗತ್ಯ. ದೇವಸ್ಥಾನ ಜೀರ್ಣೋದ್ಧಾರ ಆತ್ಮೋದ್ಧಾರಕ್ಕೆ ಮುನ್ನಡಿ ಬರುದಂತೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ದೇವಸ್ಥಾನದ ಪುನಃ ನಿರ್ಮಾಣ ಶಿಲಾನ್ಯಾಸ ಸಂದರ್ಭ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಕ್ಷೇತ್ರ ಪವಿತ್ರಪಾಣಿ ಮಹೇಶ್ ಮಡಿಯಾಲ ಅಧ್ಯಕ್ಷತೆ ವಹಿಸಿದ್ದರು. ಕುಂಟುಕುಡೇಲು ರಘುರಾಮ ತಂತ್ರಿ ಧಾರ್ಮಿಕ ಕಾರ್ಯ ನಡೆಸಿದರು. ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಎಸ್.ಕೃಷ್ಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಽಕಾರಿ ಸುರೇಶ್ ಗೌಡ, ಉದ್ಯಮಿಗಳಾದ ಗುಭ್ಯ ಶ್ರೀಧರ ಶೆಟ್ಟಿ, ಸತೀಶ್ ಕುಮಾರ್ ಆಳ್ವ, ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್, ಚಂದ್ರಶೇಖರ ಭಟ್, ಬೊಳ್ನಾಡು ಭಗವತಿ ಕ್ಷೇತ್ರದ ಚಂದ್ರಶೇಖರ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ಪ್ರಕಾಶ್, ಆಡಳಿತ ಸಮಿತಿ ಕಾರ್ಯದರ್ಶಿ ಸುರೇಶ್ ಮಡಿಯಾಲ ಮತ್ತಿತರರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಂಚಾಲಕ ಕಾನ ಈಶ್ವರ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವರಾಮ ರಾವ್ ವಂದಿಸಿದರು.