ಶಿರೋಳ: ಕಾಗೆ ಚಾಂಡಾಲ ಪಕ್ಷಿ ಎಂದವರಿಗೆ ಕಾಗೆ ದಾಸೋಹದ ಪಕ್ಷಿ ಎಂಬುದನ್ನು ತೋರಿಸಿ ಪ್ರಾಣಿ-ಪಕ್ಷಿಗಳಲ್ಲಿಯ ಸಂಸ್ಕಾರವನ್ನು ತಿಳಿಸಿಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದು ಡೋಣಿಯ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.
ಸ್ಥಳೀಯ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರದ ಲೋಕಾರ್ಪಣೆ ನಿಮಿತ್ತ 6ನೇ ದಿನದ ಪ್ರವಚನ ನೀಡಿದ ಅವರು, ಸತ್ಯ ಶುದ್ಧ ಕಾಯಕದ ವೀರಘಂಟಿ ಮಡಿವಾಳ ಮಾಚಿದೇವ ನಮಗೆಲ್ಲ ಆದರ್ಶ ಎಂದರು.
ಕಟಕೋಳದ ಶ್ರೀ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶೂನ್ಯ ಸಿಂಹಾಸನಕ್ಕೆ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿಸಿ ಸಾಮಾಜಿಕ ವಿಚಾರಧಾರೆ, ವೈಚಾರಿಕತೆಯನ್ನು ಜಗತ್ತಿಗೆ ಮೊದಲು ತಿಳಿಸಿಕೊಟ್ಟವರು ಶರಣರು ಎಂದರು.
ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸದಾಕಾಲ ಸರ್ವರಿಗೂ ಒಳಿತು ಬಯಸುವುದೇ ಮಾನವೀಯತೆ ಎಂದರು. ಕಲಬುರಗಿಯ ಸಂಗಮೇಶ ಪಾಟೀಲ ವಚನ ಸಂಗೀತ ಪ್ರಸ್ತುತಪಡಿಸಿದರು.
ಉಪಾಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಕಾರ್ಯದರ್ಶಿ ವೀರಯ್ಯ ದೊಡಮನಿ, ಕಟ್ಟಡ ಸಮಿತಿ ಉಪಾಧ್ಯಕ್ಷ ಗುರುಬಸು ಶೆಲ್ಲಿಕೇರಿ, ಕಾರ್ಯದರ್ಶಿ ಹನಮಂತ ಕಾಡಪ್ಪನವರ, ದ್ಯಾಮಣ್ಣ ಕಾಡಪ್ಪನವರ, ನಾಗನಗೌಡ್ರ ತಿಮ್ಮನಗೌಡ್ರ, ಗುರುಬಸಯ್ಯ ನಾಗಲೋಟಿಮಠ,ಪ್ರವೀಣ ಶೆಲ್ಲಿಕೆರಿ, ರಾಜು ಮರಿಗುದ್ದಿ, ಲಾಲಸಾಬ್ ಅರಗಂಜಿ, ಶರಣಪ್ಪಗೌಡ ತಿರಕನಗೌಡ್ರ, ರಮ್ಾನಸಾಬ್ ನದಾಫ್, ಈರಯ್ಯ ಮಠದ, ಶಿವಾನಂದ ಯಲಬಳ್ಳಿ, ಶ್ರೀಧರ ಶಿಫ್ರೀ, ದ್ಯಾಮಣ್ಣ ಶಾಂತಗೇರಿ, ಬಸವರಾಜ ಕುರಿ, ಬಸಣ್ಣ ಕುಪ್ಪಸ್ತ, ಶರಣಪ್ಪ ಕಾಡಪ್ಪನವರ, ಸಂಗಣ್ಣ ಕಿತ್ತಲಿ, ಮಂಜು ಕವಡಿಮಟ್ಟಿ, ಗುಡುಸಾಬ್ ಯಲಿಗಾರ, ಬಸವರಾಜ ಗಡ್ಡಿ, ದುರಗಪ್ಪ ಮೂಲಿಮನಿ, ಮೈಬುಸಾಬ್ ನದಾಫ್, ವೆಂಕಪ್ಪ ಶಾಂತಗೇರಿ, ಶರಣಪ್ಪ ಕುಪ್ಪಸ್ತ, ಇತರರಿದ್ದರು. ಬಸವರಾಜ ಸಾಲಿಮಠ ಹಾಗೂ ದ್ಯಾಮಣ್ಣ ಶಾಂತಗೇರಿ ಕಾರ್ಯಕ್ರಮ ನಿರ್ವಹಿಸಿದರು.