ಜಿಲ್ಲೆ

ಫೆ.23ರಂದು ಕಾರ್ಕಳದಲ್ಲಿ ಮಡಿವಾಳ ಮಾಚಿದೇವ ಟ್ರೋಫಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಘಟಕ, ಮಡಿವಾಳ ಮಹಿಳಾ ಘಟಕದ ನೇತೃತ್ವದಲ್ಲಿ ಅಂತರ್​ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಪ್ರೊ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್​ ಪಂದ್ಯಾಟ ಫೆ. 23ರಂದು ಕಾರ್ಕಳ ಕಾಬೆಟ್ಟು ಸಮುದಾಯ ಭವನದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕ ಅಧ್ಯಕ್ಷ ಸಂಪತ್​ ಕುಮಾರ್​ ಕಣಂಜಾರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಶಾಸಕ ವಿ. ಸುನಿಲ್​ ಕುಮಾರ್​ ಮಡಿವಾಳ ಮಾಚಿದೇವ ಟ್ರೋಫಿ-ಗೆ ಚಾಲನೆ ನೀಡಲಿದ್ದಾರೆ. ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್​ ಮಡಿವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಕೃಷ್ಣಯ್ಯ ಚಾರಿಟೇಬಲ್​ ಟ್ರಸ್ಟ್​ ಮುನಿಯಾಲು ಪ್ರವರ್ತಕ ಉದಯ ಶೆಟ್ಟಿ ಮುನಿಯಾಲು, ಮಾಚಿದೇವ ನಿಗಮದ ನಿಕಟಪೂರ್ವ ಅಧ್ಯಕ್ಷ ರಾಜು ಎಂ. ತಲ್ಲೂರು ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸಮಾರೋಪ ಸಮಾರಂಭ

ಸಾಯಂಕಾಲ 4.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಪ್ರಸಾದ್​ರಾಜ್​ ಕಾಂಚನ್​, ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ಉದಯ್​ ಸಾಲ್ಯಾನ್​ ಅಜ್ಜಾಡಿ, ಸಮಾಜ ಸೇವಕ ಬೋಳ ಪ್ರಶಾಂತ್​ ಕಾಮತ್​, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಕಾರ್ಕಳ, ಹಿಂದೂ ಮುಖಂಡ ರತ್ನಾಕರ ಅಮೀನ್​, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್​. ಕುಂದರ್​, ಉದ್ಯಮಿ ಸಂಜೀವ ಮಡಿವಾಳ ಕಾಬೆಟ್ಟು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುಂಬೈ, ರಾಯಚೂರು, ಗದಗ ಸಹಿತ ನಾನಾ ಕಡೆಗಳಿಂದ 15 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ. ಪ್ರೊ ಕಬ್ಬಡಿ ವಿಜೇತರಿಗೆ ಪ್ರಥಮ 11,111 ರೂ. ಹಾಗೂ ಟ್ರೋಫಿ, ದ್ವೀತಿಯ 7,777 ಹಾಗೂ ಟ್ರೋಫಿ, ತೃತೀಯ 3333 ಹಾಗೂ ಟ್ರೋಫಿ, ಚತುರ್ಥ 2,222 ರೂ ಹಾಗೂ ಟ್ರೋಫಿ, ಉತ್ತಮ ಹಿಡಿತಗಾರ ಟ್ರೋಫಿ, ಉತ್ತಮ ದಾಳಿಗಾರ ಟ್ರೋಫಿ, ಉತ್ತಮ ಸವ್ಯಸಾಚಿ ಟ್ರೋಫಿ ನೀಡಲಾಗುತ್ತದೆ. ತ್ರೋಬಾಲ್​ನಲ್ಲಿ ಪ್ರಥಮ 5,555 ರೂ. ಟ್ರೋಫಿ, ದ್ವೀತಿಯ 3,333 ರೂ. ಹಾಗೂ ಟ್ರೋಫಿ, ಉತ್ತಮ ಸವ್ಯಸಾಚಿ ವಿಭಾಗದಲ್ಲಿ ಟ್ರೋಫಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸಾದ್​ ಕುಮಾರ್​ ಕುಕ್ಕುಂದೂರು, ಸದಾನಂದ್​ ಸಾಲ್ಯಾನ್​ ಕೆರ್ವಾಶೆ, ಸುಮಾ ಜಯಕರ ಮಡಿವಾಳ ನಕ್ರೆ, ಸವಿತಾ ಸುಧಾಕರ ಅಜೆಕಾರ್​ ಉಪಸ್ಥಿತರಿದ್ದರು.