ಮಂಗಳೂರು : ಎಂಎಂಎಂ ಗ್ರೂಪ್ಸ್ ಬ್ಯಾನರ್‌ನಡಿ ನಿರ್ಮಾಣವಾದ ಮಿಸ್ಟರ್ ಮದಿಮಯೆ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡು ಸೆನ್ಸಾರ್ ಹಂತಕ್ಕೆ ತಲುಪಿದೆ. ಸಿನಿಮಾ ಅಕ್ಟೋಬರ್‌ನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ನವೀನ್.ಜಿ.ಪಿ. ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿ ಕೃಷ್ಣ ಕುಡ್ಲ ಅವರು ನಟಿಸುತ್ತಿದ್ದು, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಪಿಂಕಿ ರಾಣಿ, ರವಿ ರಾಮಕುಂಜ, ಮನೀಷ್ ಶೆಟ್ಟಿ ಉಪ್ಪಿರ, ಅಕ್ಷಯ್ ಸರಿಪಲ್ಲ, ಸಂದೀಪ್ ಶೆಟ್ಟಿ ರಾಯಿ, ಶರಣ್ ಕೈಕಂಬ, ಪ್ರವೀಣ್ ಮರ್ಕಮೆ, ಸವ್ಯರಾಜ್, ಪೃಥ್ವಿ ಕುಂದರ್ ಪೊಳಲಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ.
ಪೋಸ್ಟರ್ ಬಿಡುಗಡೆ
ತುಳು ಸಿನಿಮಾರಂಗದ ಇತಿಹಾಸದಲ್ಲೇ 75 ಫೀಟ್‌ನ ಫಸ್ಟ್ ಲುಕ್ ಪೋಸ್ಟರ್ ಕದ್ರಿ ಮೈದಾನದಲ್ಲಿ ಬಿಡುಗಡೆಗೊಂಡಿದೆ. ನಟ ನಿರ್ದೇಶಕ ದೇವದಾಸ್ ಕಾಪಿಕಾಡ್, ಕಿಶೋರ್.ಡಿ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಗಂಗಾಧರ ಶೆಟ್ಟಿ ಅಳಕೆ, ಸಾಯಿಕೃಷ್ಣ ಕುಡ್ಲ,
ಭೋಜರಾಜ ವಾಮಂಜೂರು, ಬಾಳ ಜಗನ್ನಾಥ ಶೆಟ್ಟಿ, ಕಾರ್ಪೋರೇಟರ್ ಮನೋಹರ ಶೆಟ್ಟಿ, ಪಮ್ಮಿ ಕೊಡಿಯಾಲ್ ಬೈಲ್, ಪ್ರಕಾಶ್ ತುಮಿನಾಡು, ಸುನಿಲ್ ನೆಲ್ಲಿಗುಡ್ಡೆ, ಸ್ವರಾಜ್ ಶೆಟ್ಟಿ, ರೋಶನ್ ಶೆಟ್ಟಿ, ತ್ರಿಶೂಲ್ ಶೆಟ್ಟಿ, ರಾಜೇಶ್ ಉಪಸ್ಥಿತರಿದ್ದರು.
ಮಿಥುನ್ ಕೆ ಎಸ್ ಹಾಗೂ ರಾಜೇಶ್ ಫೆರಾವೊ ಅವರ ನಿರ್ಮಾಣದ ಈ ಮಿಸ್ಟರ್ ಮದಿಮಯೆ ಸಿನಿಮಾಗೆ ಕೆ .ಪಿ.ಮಿಲನ್ ಸಂಗೀತ ಹಾಗು ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಮದುವೆ ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ. ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸುತ್ತದೆ ಎಂದು ನಿರ್ದೇಶಕ ನವೀನ್ ಪೂಜಾರಿ ತಿಳಿಸಿದ್ದಾರೆ.