ಜಿಲ್ಲೆ

ಅ.೧೭ ರಂದು ವಿವಿಧ ಕಾರ್ಯಕ್ರಮ

ಆದರ್ಶ್. ಎಂ.ಕೆ.

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕತಿಕ ಕಾರ್ಯಕ್ರಮಗಳ ಎರಡನೇ ದಿನವಾದ ಅ.೧೭ ರಂದು ವೈವಿಧ್ಯಮಯ ಕಾರ್ಯಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯಶಾಲಾ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ಕುಂದನ ನಾಟ್ಯಾಲಯ ತಂಡದಿಂದ, ಶ್ರೀ ಮಂಜುನಾಥ ಮಹಿಮೆ ನತ್ಯ ರೂಪಕ, ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ಭಾರತೀಯ ಶಾಸ್ತ್ರೀಯ ನೃತ್ಯ, ಕುಶಾಲನಗರದ ಟೀಮ್ ಅ್ಯಟಿಟ್ಯೂಡ್ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ಮಂಜುಭಾರ್ಗವಿ ಮತ್ತು ತಂಡದಿಂದ ನೃತ್ಯ ಹಾಗೂ ಮಡಿಕೇರಿಯ ಮುತ್ತಿನ ಹಾರ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜಿತವಾಗಿದೆ.


ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಮೈಸೂರಿನ ಖ್ಯಾತ ಮರಳು ಕಲಾವಿದೆ ಎನ್.ಎಂ.ಗೌರಿ ರೂಪಿಸಿರುವ ಕಾಂತಾರ ಶೈಲಿಯ ವನದೇವ ಮರಳುಕಲಾಕತಿಯನ್ನೂ ವೀಕ್ಷಿಸಬಹುದಾಗಿದೆ. ಫೋಟೋ ಪಾಯಿಂಟ್‌ನಲ್ಲಿ ಮಡಿಕೇರಿ ದಸರಾದ ಸಂಭ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಎಚ್.ಟಿ.ಅನಿಲ್ ತಿಳಿಸಿದ್ದಾರೆ.