ಮಡಿಕೇರಿ:
ಮಡಿಕೇರಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಅಧ್ಯಕ್ಷರಾಗಿ ಡಿ.ಮಧುಕರ್ ಶೇಟ್, ಕಾರ್ಯದರ್ಶಿಯಾಗಿ ಎಂ.ಪಿ.ನಾಗೇಂದ್ರ, ಖಜಾಂಚಿಯಾಗಿ ಎನ್.ಬಿ.ರವಿ, ಉಪಧ್ಯಾಕ್ಷರಾಗಿ ದಿನೇಶ್ ರಾವ್, ಜೆ.ವಿ.ಕೋಟಿ, ಟೇಮರ್ ಆಗಿ ಹೆಚ್.ಟಿ.ಚಾಮ, ಟೈಲ್ ಟ್ವಿಸ್ಟರ್ ಆಗಿ ಕಮಲಾ ಮುರುಗೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಮೋಹನ್ ಕುಮಾರ್, ಸದಸ್ಯತ್ವ ಸಮಿತಿಯ ಅಧ್ಯಕ್ಷರಾಗಿ ೦ಂ.ಎ.ನಿರಂಜನ್, ಕ್ಲಬ್ ಮೆಲ್ವಿಚರಕಾಗಿ ಬಿ.ವಿ.ಮೋಹನ್ ದಾಸ್, ಎಲ್‌ಸಿಐಎಫ್ ಅಧ್ಯಕ್ಷರಾಗಿ ಕವಿತಾ ಕಾವೇರಮ್ಮ, ನಿರ್ದೇಶಕರುಗಳಾಗಿ ಕೆ.ಮಧುಕರ್, ಪಿ.ಪಿ.ಸೋಮಣ್ಣ, ಎಸ್.ಬಿ.ಮುರುಗೇಶ್, ಸಂಗೀತಾ ಮೋಹನ್‌ದಾಸ್, ಕೆ.ಕೆ.ದಾಮೋದರ್, ಕೆ.ಟಿ.ಬೇಬಿ ಮ್ಯಾಥ್ಯು, ಡಿ.ಜಿ.ಕಿಶೋರ್, ಅಗಸ್ಟಿನ್ ಜಯರಾಜ್ ಪ್ರಮಾಣ ವಚನ ಸ್ವೀಕರಿಸಿದರು.
ಲಯನ್ಸ್ ಸಂಸ್ಥೆ ೩೧೭ ಡಿ ಯ ೨ನೇ ಉಪ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಪದಗ್ರಹಣ ಸಮಾರಂಭ ನಡೆಸಿಕೊಟ್ಟರು. ನಂತರ ಮಾತನಾಡಿ ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸದಸ್ಯರಿಗೆ ಕರೆ ನೀಡಿದರು.
ನೂತನ ಅಧ್ಯಕ್ಷ ಮಧುಕರ್ ಶೇಟ್ ಮಾತನಾಡಿ ಹಿಂದಿನ ಅಧ್ಯಕ್ಷರುಗಳ ಸೇವೆಯನ್ನು ಸ್ಮರಿಸಿದರು. ೧೦ ಸೆಂಟ್ ಜಾಗವನ್ನು ಉಚಿತವಾಗಿ ಕುಪ್ಪಂಡ ಚಿಮ್ಮಿ ಕುಟ್ಟಯ್ಯ ಅವರು ತಮ್ಮ ತಂದೆ ಪಾಂಡಂಡ ನಂಜಪ್ಪ ಜ್ಞಾಪಕಾರ್ಥ ನೀಡಿದ ಫಲವಾಗಿ ಸಂಸ್ಥೆಗೆ ಸ್ವಂತ ಕಟ್ಟಡದ ಭಾಗ್ಯ ಲಭಿಸಿತು ಎಂದರು.
ನಿರ್ಗಮಿತ ಅಧ್ಯಕ್ಷೆ ಕವಿತಾ ಕಾವೇರಮ್ಮ ಮಾತನಾಡಿ, ೨೦೨೨-೨೩ನೇ ಸಾಲಿನ ಎಲ್ಲಾ ಸೇವಾ ಕಾರ್ಯಗಳಲ್ಲಿ ಸಹಕಾರ ನೀಡಿದ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿ, ನೂತನ ಸಮಿತಿಗೆ ಶುಭಕೋರಿದರು. ಮಡಿಕೇರಿ ವಕೀಲರ ಸಂಘದ ಆಡಳಿತ ಮಂಡಳಿಗೆ ಸಂಸ್ಥೆಯ ಸದಸ್ಯ ಎಂ.ಎ.ನಿರಂಜನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ರಾಯಭಾರಿ ಧನು ಉತ್ತಯ್ಯ, ಸಂಯೋಜಕ ಪಂಚಂ ತಿಮ್ಮಯ್ಯ, ಮಮತಾ ಶೆಣೈ, ವಲಯಧ್ಯಕ್ಷರುಗಳಾದ ರೋಹಿತ್, ಬಾಲಕೃಷ್ಣ ಹಾಗೂ ಸತೀಶ್ ಉಪಸ್ಥಿತರಿದ್ದರು.