ಮಡಿಕೇರಿ: ಸ್ವಾತಂತ್ರೊೃೀತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೃಹತ್ ರಾಷ್ಟ್ರ ಧ್ವಜಾರೋಹಣ ನಡೆಸಿ ಮಡಿಕೇರಿ ತಾಲೂಕು ಪಂಚಾಯಿತಿ ದೇಶಾಭಿಮಾನ ಮೆರೆದಿದೆ.
ಅಮೃತ ಮಹೋತ್ಸವ ಸಂಭ್ರಮಿಸಲು ತಾಲೂಕು ಪಂಚಾಯಿತಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸಿಬ್ಬಂದಿ ಸೇರಿ ಆವರಣ ಸ್ವಚ್ಛಗೊಳಿಸಿದರು. ರಾತ್ರಿ ಹೊತ್ತು ತಾಪಂ ಕೇಸರಿ, ಬಿಳಿ, ಹಸಿರು ದೀಪಲಾಂಕೃತವಾಗಿ ಕಂಗೊಳಿಸುತಿತ್ತು.
ಸೋಮವಾರ ಬೆಳಗ್ಗೆ ೮ ಗಂಟೆಗೆ ಸಿಬ್ಬಂದಿ ತ್ರಿವರ್ಣ ಧಿರಿಸಿನಲ್ಲಿ ಹಾಜರಾದರು. ೧೦*೧೫ ಮೀಟರ್ ಉದ್ದದ ಧ್ವಜವನ್ನು ಧ್ವಜಾರೋಹಣ ಮಾಡುವ ಮೂಲಕ ದೇಶಭಕ್ತಿ ಮೆರೆದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಖರ್, . ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ಕ್ಷಣ. ಹಬ್ಬಕ್ಕಿಂತ ಮಿಗಿಲಾಗಿ ಎಲ್ಲೆಡೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯದ ಹೆಜ್ಜೆ ಮರೆಯಬಾರದು. ಪರಕೀಯರಿಂದ ಮುಕ್ತಿ ಒದಗಿಸಿಕೊಟ್ಟ ಸ್ವಾತಂತ್ರ್ಯ ವೀರರಿಗೆ ಸಲಾಂ ಎಂದರು.
ಸಿಬ್ಬಂದಿ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸ ಲಾಯಿತು.