ಜಿಲ್ಲೆ

ಸತ್ಯ ಕರ್ಕೇರ ತಲೆಯಲ್ಲಿ ಡಾ.ಅಂಬೇಡ್ಕರ್ ಮೂಡಿಸಿದ ವಿನಯ್

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಖ ಭಾಗವನ್ನು ತನ್ನ ತಲೆ ಹಿಂಭಾಗದಲ್ಲಿ ಕೇಶ ವಿನ್ಯಾಸ ಮಾಡಿಸಿ ಕೊಳ್ಳುವುದರ ಮೂಲಕ ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೇರ ಗಮನ ಸೆಳೆದಿದ್ದಾರೆ.

೭೪ನೇ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ವಿಶೇಷ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಚಿತ್ರ ಕಲೆಗಾರ ಮಡಿಕೇರಿಯ ವಿನಯ್ ಬುಧವಾರ ತಡರಾತ್ರಿವರೆಗೆ ಶ್ರದ್ಧೆಯಿಂದ ಸತ್ಯ ಕರ್ಕೇರ ಅವರ ತಲೆ ಹಿಂಭಾಗದಲ್ಲಿ ಡಾ.ಬಾಬಾ ಸಾಹೇಬ್ ಭೀಮರಾಯರನ್ನು ಚಿತ್ರಿಸಿದ್ದಾರೆ.

ಜನವರಿ ೨೬ ದೇಶದ ಏಕತೆಗಾಗಿ, ಸಮಾನತೆಗಾಗಿ, ಪ್ರಜಾ ಏಳಿಗೆಯ ಸಾರ್ವಭೌಮತ್ವದ ಚುಕ್ಕಾಣಿಗಾಗಿ ರಚನೆಯಾದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ. ಸಂವಿಧಾನ ರಚಿಸಿದ ದೇಶದ ಮಹಾನ್ ನಾಯಕರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ, ಮಹಾನ್ ಮಾನವತಾವಾದಿಯನ್ನು ತಲೆಯಲ್ಲಿ ಚಿತ್ರಿಸಿಕೊಂಡಿದ್ದೇನೆಂದು ಸತ್ಯ ಕರ್ಕೇರ ಹೇಳಿದ್ದಾರೆ.