ಮಡಿಕೇರಿ: ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಸ್ಥಳಗಳಿಗೆ ಶುಕ್ರವಾರ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯಿಂದ ಊರುಬೈಲು, ಚೆಂಬು, ದಬ್ಬಡ್ಕ, ಮೇಲ್ ಚೆಂಬು, ಪೆರಾಜೆ ಗ್ರಾಮಗಳಲ್ಲಿ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ದರು. ಮಾರ್ಪಡ್ಕ ಸೇತುವೆ, ಆನೆಹಳ್ಳ ಸೇತುವೆ ಹಾಗೂ ದಬ್ಬಡ್ಕ ಸೇತುವೆಗಳು ಮಳೆಯಿಂದ ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಇದನ್ನು ಕೂಡ ಪರಿಶೀಲಿಸಿದರು.
ದಬ್ಬಡ್ಕ ಗ್ರಾಮದ ಕೊಪ್ಪದ ಬಾಲಕೃಷ್ಣ ಅವರಿಗೆ ೧೦ ಸಾವಿರ, ಎನ್.ಕೆ. ಉಮೇಶ್ ಅವರಿಗೆ ೯೫,೧೦೦ ರೂಪಾಯಿ ಮೊತ್ತದ ಪರಿಹಾರ ಚೆಕ್ ವಿತರಿಸಿದರು. ಪೆರಾಜೆ ಗ್ರಾಮದ ಉಪೇಂದ್ರ, ತಂಗಪ್ಪನ್, ಪುರುಷೋತ್ತಮ್ ನಾಯರ್ ಇವರಿಗೆ ತಲಾ ೧೦ ಸಾವಿರ ರೂ. ಮೊತ್ತದ ಚೆಕ್ ವಿತರಿಸಿದರು. ಮಡಿಕೇರಿ ತಹಸೀಲ್ದಾರ್ ಪಿ.ಎಸ್. ಮಹೇಶ್, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮತ್ತಿತರರು
ಇದ್ದರು.