ಜಿಲ್ಲೆ

ಮಡಿಕೇರಿಯ ನಾಟ್ಯಕಲಾ ಡ್ಸಾನ್ಸ್ ಸ್ಟುಡಿಯೋ ಮಕ್ಕಳ ಸಾಧನೆ

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಡ್ಯಾನ್ಸ್ ರೆವಲೂಷನ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಎವರ್ ಗ್ರೀನ್ ಕೂರ್ಗ್ ಕಲೋತ್ಸವ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದಾರೆ.

ಡ್ಯಾನ್ಸ್ ಮತ್ತು ಫ್ಯಾಷನ್ ಫೆಸ್ಟ್ -೨೦೨೨ ರಲ್ಲಿ ಸಬ್ ಜೂನಿಯರ್ಸ್ ತಂಡ ಪ್ರಥಮ ಬಹುಮಾನ ಪಡೆದಿದೆ. ವಿದ್ಯಾರ್ಥಿಗಳಾದ ದಿಶಾ, ಚಾರ್ವಿ, ಸಾನ್ವಿಕ, ಧೃತಿ, ಸಿಂಚನ, ಗ್ರಂಥ, ಅಲೀಶ, ದಿಯಾ, ಮೋನಾಲಿ, ಆಧ್ಯ, ಪ್ರೀತಮ್, ಹಾರ್ಧಿಕ್, ಪ್ರೇಕ್ಷಿತ್, ಅಭಿರಾಮ್ ಆರ್ಯ ತಂಡದಲ್ಲಿದ್ದರು.

ಜೂನಿಯರ್ಸ್ ತಂಡ ಕೂಡ ಪ್ರಥಮ ಬಹುಮಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳಾದ ಕಾವೇರಮ್ಮ, ಚಾರ್ವಿತ, ಆರಾಧ್ಯ, ಪ್ರೇಕ್ಷ, ಶ್ರೇಯ, ಅರ್ಸಾಲನ್, ವೇನಿಷಾ, ಗಗನ್, ತೇಜಸ್, ಗಿಯಾನ್, ಕುನಾಲ್, ಮನಿಷಾ, ಸಮೀಕ್ಷಾ, ಬಿಂಬಿತ್, ಚಿನ್ಮಯ್, ಅಭಿನವ್ ತಂಡ ದಲ್ಲಿದ್ದರು.

ಜೂನಿಯರ್ ಸೋಲೋ ವಿಭಾಗದಲ್ಲಿ ಗ್ರಂಥ ವಿಶೇಷ ಬಹುಮಾನ ಹಾಗೂ ಸೀನಿಯರ್ ಸೋಲೋ ವಿಭಾಗದಲ್ಲಿ ಕೆ.ಎಲ್. ಹರ್ಷಿತ ದ್ವಿತೀಯ ಬಹುಮಾನ ಪಡೆದುಕೊಂಡರು. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ಅಭಿಷೇಕ್ ನೃತ್ಯ ಸಂಯೋಜನೆ ಮಾಡಿದರು.