ಜಿಲ್ಲೆ

ಶಿರಂಗಾಲ ನಿವಾಸಿಗಳಿಗೆ ಕಿಟ್ ವಿತರಣೆ

Kodagu

ಮಡಿಕೇರಿ: ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಸೋಮವಾರಪೇಟೆ ತಾಲೂಕಿನ ಶಿರಂಗಾಲ ನಿವಾಸಿಗಳಿಗೆ ಅಗತ್ಯ ಸಾಮಗ್ರಿಗಳ ಕಿಟ್‌ಗಳನ್ನು ಮಂಗಳವಾರ ವಿತರಿಸಲಾಯಿತು.

ಈ ಪ್ರದೇಶ ಸೀಲ್‌ಡೌನ್ ಆದ ಕಾರಣ ಇಲ್ಲಿನ ನಿವಾಸಿಗಳು ದಿನನಿತ್ಯದ ಸಾಮಗ್ರಿಗಳಿಗೆ ತೊಂದರೆ ಅನುಭವಿಸುವುದನ್ನು ಅಲ್ಲಿನ ನಿವಾಸಿಗಳು ಅಧ್ಯಕ್ಷರ ಗಮನಕ್ಕೆ ತಂದಿದ್ದರು. ಇವರ ಸಂಕಷ್ಟಕ್ಕೆ ಸ್ಪಂದಿಸಿದ ಕೆ.ಎಂ.ಬಿ ಗಣೇಶ್ ಕಿಟ್ ಕೊಡುವ ಮೂಲಕ ಜನತೆಯ ಸಂಕಷ್ಟಕ್ಕೆ ನೆರವಾದರು.

ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಶ, ಜಿ.ಪಂ. ಸದಸ್ಯ ಪುಟ್ಟರಾಜು, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನಿಲ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಸಂಘಟನ ಕಾರ್ಯದರ್ಶಿ ಇಬ್ರಾಹಿಂ, ಪಾಪಣ್ಣ, ಶನಿವಾರಸಂತೆ ಜಮಾತ್ ಅಧ್ಯಕ್ಷ ಅಮಿರ್ ಸಾಬ್, ಅಬ್ದುಲ್ ರಝಕ್, ಶನಿವಾರಸಂತೆ ನಗರ ಅಧ್ಯಕ್ಷ ಮೊಯಿದು ಉಪಸ್ಥಿತರಿದ್ದರು.