ಜಿಲ್ಲೆ

ಕರೊನಾ ವಾರಿಯರ್ಸ್‌ಗೆ ಔತಣ ಕೂಟ

Kodagu

ಮಡಿಕೇರಿ: ಕರೊನಾ ವೈರಾಣು ಸೋಂಕು ಜಿಲ್ಲೆಯಲ್ಲಿ ಹರಡದಂತೆ ಅಹೋರಾತ್ರಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿಶೇಷ ರೀತಿ ಗೌರವ ಸೂಚಿಸಿದರು. ಸಚಿವರ ಆಸಕ್ತಿಯಿಂದ ಶುಕ್ರವಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಚಿವರು ಭೋಜನ ಸೇವಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಂದಾಯ, ವೈದ್ಯಕೀಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಡಿಕೇರಿ ಕೊಡವ ಸಮಾಜದಲ್ಲಿ ಪೊಲೀಸರಿಗೆ ಔತಣಕೂಟ ನಡೆಯಿತು.

ಸಚಿವರೊಂದಿಗೆ ಔತಣಕೂಟದಲ್ಲಿ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಪಾಲ್ಗೊಂಡಿದ್ದರು. ಔತಣಕೂಟದಲ್ಲಿ ಪಾಲ್ಗೊಂಡಿದ್ದವರಿಗೆ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಡಿಸಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್, ಸಿಇಒ ಕೆ.ಲಕ್ಷ್ಮೀಪ್ರಿಯಾ, ಎಡಿಸಿ ಡಾ.ಸ್ನೇಹಾ, ಎಸಿ ಟಿ.ಜವರೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಕಳ್ಳಿಚಂಡ ಕಾರ್ಯಪ್ಪ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಕೊಡಗು ಉಸ್ತುವಾರಿ ಅನನ್ಯ ವಾಸುದೇವ್, ತಹಸೀಲ್ದಾರ್‌ಗಳಾದ ಪಿ.ಎಸ್.ಮಹೇಶ್, ಗೋವಿಂದರಾಜು, ನಂದೀಶ್, ಇಒಗಳಾದ ಲಕ್ಷ್ಮೀ ಚಂದ್ರಶೇಖರ್, ಷಣ್ಮುಗಂ, ಸುನೀಲ್‌ಕುಮಾರ್, ಡಿವೈಎಸ್ಪಿಗಳಾದ ದಿನೇಶ್‌ಕುಮಾರ್, ಶೈಲೇಂದ್ರ, ಜಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.