ಜಿಲ್ಲೆ

ಪೇ ಸಿಎಂ ಪ್ರತಿಭಟನೆಗಾರರ ಬಂಧನ

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಮಡಿಕೇರಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಬುಧವಾರ ಪೇ ಸಿಎಂ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ಸಿಗರನ್ನು ಪೊಲೀಸರು ಬಂಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಇಂದಿರಾಗಾಂ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ವೃತ್ತ, ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ೪೦ ಪರ್ಸೆಂಟ್ ಸರ್ಕಾರ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಿಮ್ಮಯ್ಯ ವೃತ್ತದಲ್ಲಿರುವ ಬಸ್ಸು ತಂಗುದಾಣದಲ್ಲಿ ಪೇ ಸಿಎಂ ಕರಪತ್ರ ಅಂಟಿಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ಸಿಗರನ್ನು ಪೊಲೀಸರು ಬಂಸಿದರು. ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಪೊಲೀಸರು ಇಂದಿರಾ ಗಾಂ ವೃತ್ತದಿಂದ ಪ್ರತಿಭನಾಕಾರರನ್ನು ಸುತ್ತು ವರಿದಿದ್ದರು.

ಯಾರಿಗೂ ಪೇ ಸಿಎಂ ಕರಪತ್ರ ಅಂಟಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಬಂತರಾದ ಬಳಿಕವೂ ಕೆಲವರು ಪೊಲೀಸ್ ವಾಹನದಲ್ಲಿ ಪ್ರದರ್ಶಿಸುತ್ತಿದ್ದ ಪೇ ಸಿಎಂ ಕರಪತ್ರವನ್ನು ಪೊಲೀಸರು ಕಿತ್ತುಕೊಂಡರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಪೇ ಸಿಎಂ ಚಳುವಳಿ ಮೂಲಕ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ರಾಜ್ಯದಲ್ಲಿ ಹಗರಣ ಮುಕ್ತ ಸರ್ಕಾರ ಬರಬೇಕಾಗಿದೆ. ಕಾಂಗ್ರೆಸ್ ಅಕಾರಕ್ಕೆ ಬಂದ ಮೇಲೆ ಪ್ರಸ್ತುತ ಸಚಿವರಾಗಿರುವ ೧೫ ಜನ ಜೈಲಿಗೆ ಹೋಗುವುದು ಖಚಿತ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದರು.

ಭ್ರಷ್ಟಾಚಾರದ ಕೊಳೆಯಲ್ಲಿ ಸರ್ಕಾರವಿದೆ. ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಟಿ.ಪಿ. ರಮೇಶ್ ಟೀಕಿಸಿದರು.

ಸರ್ಕಾರಿ ಕಚೇರಿಯಲ್ಲಿ ಮುಗ್ದ ಜನರ ಕೆಲಸವಾಗುತ್ತಿಲ್ಲ. ಎಲ್ಲೆ ಹೋದರೂ ಲಂಚ, ಲಂಚ. ಜನಪ್ರತಿನಿಗಳಿಗೆ ನೀಡುವ ಉದ್ದೇಶದಿಂದ ಸರ್ಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾರೆ. ಬಿಜೆಪಿಯ ಸರ್ವರೂ ಭ್ರಷ್ಟರಾಗಿದ್ದಾರೆಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಆರೋಪಿಸಿದರು.

ಆರೇಳು ತಿಂಗಳಲ್ಲಿ ಈ ಸರ್ಕಾರ ಸತ್ತು ಹೋಗಲಿದೆ. ಅಲ್ಲಿಯವರಗೆ ಎಷ್ಟು ಬಾಚಿಕೊಳ್ಳಲು ಸಾಧ್ಯವೋ ಅಷ್ಟು ಬಾಚಿಕೊಳ್ಳುತ್ತಿದ್ದಾರೆಂದು ದೂಷಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎ. ಮುನೀರ್ ಅಹಮ್ಮದ್, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ರಾಜೀವ್ ಗಾಂ ಪಂಚಾಯತ್‌ರಾಜ್ ಸಮಿತಿ ಅಧ್ಯಕ್ಷ ತೆನ್ನೀರ ಮೈನಾ, ಮಹಿಳಾ ಕಾಂಗ್ರೆಸ್ ಮಡಿಕೇರಿ ನಗರಾಧ್ಯಕ್ಷೆ ಹೊಟ್ಟೆಯಂಡ ್ಯಾನ್ಸಿ ಮುತ್ತಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಬೇಗ ಬಿಡ್ತೀರಾ?
ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿರುವ ಬಸ್ಸು ತಂಗುದಾಣದಲ್ಲಿ ಪೇ ಸಿಎಂ ಕರಪತ್ರ ಅಂಟಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಸಲಾರಂಭಿಸಿದರು. ಈ ವೇಳೆ ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ್ಯಾನ್ಸಿ ಮುತ್ತಣ್ಣ, ನಮ್ಮನ್ನು ಬೇಗ ಬಿಡ್ತೀರಾ ಎಂದು ಪೊಲೀಸರನ್ನು ಕೇಳಲಾರಂಭಿಸಿದರು. ಈ ವೇಳೆ ಪೊಲೀಸರು ಜೋರಾಗಿ ನಗಲಾರಂಭಿಸಿದರು.
ಬಂಧನದಿಂದ ತಪ್ಪಿಸಿಕೊಳ್ಳಲು ಕೆಲವು ಯುವಕರು ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರಂತೆ ಸೇರಿಕೊಂಡಿದ್ದರು. ಬಂಸಲ್ಪಟ್ಟ ಕಾಂಗ್ರೆಸ್ಸಿ ಗರನ್ನು ೨ ವಾಹನದಲ್ಲಿ ಠಾಣೆಯತ್ತ ಕರೆದುಕೊಂಡು ಹೋಗಲಾಯಿತು. ತದನಂತರ ತಂಗುದಾಣದಲ್ಲಿದ್ದ ಯುವಕರ ಬಳಿಗೆ ಪೊಲೀಸರು ತೆರಳುತ್ತಿದ್ದಂತೆ ಮನೆಯತ್ತ ತೆರಳಿದರು.

ಡಾ.ಮಂಥರ್ ಭೇಟಿ
ಪೇ ಸಿಎಂ ಪ್ರತಿಭಟನಾ ಮೆರವಣಿಗೆ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತ ಸಮೀಪಿಸುತ್ತಿದ್ದಂತೆ ವಿಧಾನ ಪರಿಷತ್ ಚುನಾವಣೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಸ್ಥಳಕ್ಕೆ ಆಗಮಿಸಿದರು. ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅವರ ಹೆಗಳ ಮೇಲೆ ಕೈಹಾಕಿ ಕೊಂಡು ಸ್ವಲ್ಪ ದೂರ ಸಾಗಿದರು. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನಾಕಾರರು ಸೇರುತ್ತಿದ್ದಂತೆ ಮಂಥರ್ ಗೌಡ ಸ್ಥಳದಿಂದ ನಿರ್ಗಮಿಸಿದರು. ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾರೆಂದು ಕೆಲವು ಪ್ರತಿಭಟನಾಕಾರರು ಅಸಮಧಾನ ವ್ಯಕ್ತ ಪಡಿಸಿದರು.

ಕಾಂಗ್ರೆಸ್ಸಿಗರ ಭಿನ್ನಾಭಿಪ್ರಾಯ
ಪೇ ಸಿಎಂ ಕರಪತ್ರ ಅಂಟಿಸುವ ಸ್ಥಳದ ವಿಚಾರಕ್ಕೆ ಸಂಬಂಸಿದ್ದಂತೆ ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯ ಬಹಿರಂಗಗೊಂಡಿತು. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆದ ಬಳಿಕ ಜಿಲ್ಲಾಕಾರಿ ಕಚೇರಿ ಎದುರಿನ ತಡೆಗೋಡೆಗೆ ಪೇ ಸಿಎಂ ಕರಪತ್ರ ಅಂಟಿಸುವುದಾಗಿ ತೆನ್ನೀರ ಮೈನಾ, ಹೊಸೂರು ಸೂರಜ್ ಘೋಷಿದರು. ತಡೆಗೋಡೆಯತ್ತ ತೆರಳುತ್ತಿದ್ದಂತೆ ಅಲ್ಲಿಗೆ ಹೋಗುವುದು ಬೇಡ ಎಂದು ಟಿ.ಪಿ. ರಮೇಶ್ ಆಕ್ಷೇಪ ವ್ಯಕ್ತ ಪಡಿಸಿದರು. ಅಲ್ಲಿಂದ ಬಸ್ಸು ತಂಗುದಾಣದಲ್ಲಿ ಕರಪತ್ರ ಅಂಟಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಬಂಸಿದರು.